ADVERTISEMENT

ಜಾನ್ಸನ್ ಕ್ರಿಕೆಟ್‌ ಕ್ಲಬ್‌ಗೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 15:49 IST
Last Updated 5 ಡಿಸೆಂಬರ್ 2018, 15:49 IST

ಬೆಂಗಳೂರು: ಮನೀಷ್ ಕೊಣ್ಣೂರು ಮತ್ತು ದೀಪಂಕರ್ ದಾಸ್ ಅವರ ಅಮೋಘ ಆಟದ ಬಲದಿಂದ ಜಾನ್ಸನ್‌ ಕ್ರಿಕೆಟ್‌ ಕ್ಲಬ್ ತಂಡ ಕೆಎಸ್‌ಸಿಎ ಗುಂಪು1, ನಾಲ್ಕನೇ ಡಿವಿಷನ್ ಕ್ರಿಕೆಟ್ ಲೀಗ್‌ನಲ್ಲಿ ಭರ್ಜರಿ ಜಯ ಗಳಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ ಕಪಿಲ್ ಕ್ರಿಕೆಟ್ ಕ್ಲಬ್ ತಂಡವನ್ನು ಜಾನ್ಸನ್‌ 272 ರನ್‌ಗಳಿಂದ ಮಣಿಸಿತು.

ಸಂಕ್ಷಿಪ್ತ ಸ್ಕೋರು: ಜಾನ್ಸನ್‌ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 409 (ಅಭಿಷೇಕ್‌ 58, ಮನೀಷ್‌ ಕೊಣ್ಣೂರು 154, ದೀಪಂಕರ್‌ 44; ರಾಘವೇಂದ್ರ 62ಕ್ಕೆ5, ಶ್ರೀನಾಥ್‌ 28ಕ್ಕೆ2); ಕಪಿಲ್ ಕ್ರಿಕೆಟ್ ಕ್ಲಬ್‌: 31 ಓವರ್‌ಗಳಲ್ಲಿ 137 (ರಾಘವೇಂದ್ರ 36; ದೀಪಂಕರ್ ದಾಸ್‌ 39ಕ್ಕೆ5, ಹೃದಯ್‌ ಸಿಂಘ್ವಿ 19ಕ್ಕೆ2). ಫಲಿತಾಂಶ: ಜಾನ್ಸನ್‌ ಕ್ರಿಕೆಟ್ ಕ್ಲಬ್‌ಗೆ 272 ರನ್‌ಗಳ ಜಯ. ಯಂಗ್ ಕ್ರಿಕೆಟರ್ಸ್‌(2): 48.2 ಓವರ್‌ಗಳಲ್ಲಿ 273 (ನಿಖಿಲ್ 129; ವಿನೀತ್‌ 48ಕ್ಕೆ2, ಭಾವನ್‌ 54ಕ್ಕೆ2, ಪ್ರಣವ್‌ 31ಕ್ಕೆ2); ಬಿಎಂಎಸ್‌ಸಿಇ: 32 ಓವರ್‌ಗಳಲ್ಲಿ 186 (ಪ್ರಣವ್‌ 40, ಅನಿರುದ್ಧ 38, ವಿರಿಂಚಿ 67; ಆದಿತ್ಯ ಎಂ.ಬಿ 24ಕ್ಕೆ2, ಅನೀಷ್‌ 38ಕ್ಕೆ3, ಅಭಿಲಾಷ್‌ 9ಕ್ಕೆ3). ಫಲಿತಾಂಶ: ಯಂಗ್ ಕ್ರಿಕೆಟರ್ಸ್‌ಗೆ 87 ರನ್‌ಗಳ ಗೆಲುವು. ಹೆಡ್‌ಕ್ವಾರ್ಟರ್ಸ್ ಕ್ರಿಕೆಟ್‌ ಕ್ಲಬ್‌: 37 ಓವರ್‌ಗಳಲ್ಲಿ 179 (ಸುಜಯ್‌ 37; ಶ್ರೇಯಸ್‌ ಡಿ.ಎಂ 41ಕ್ಕೆ2, ಆದಿತ್ಯ ರಾವ್‌ 18ಕ್ಕೆ3); ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟ್‌ ಕ್ಲಬ್‌: 25.1 ಓವರ್‌ಗಳಲ್ಲಿ 128 (ಶ್ರೇಯಸ್‌ ಡಿ.ಎಂ 29; ಗೌರವ್‌ ಜಿ.ಎಸ್‌ 41ಕ್ಕೆ4, ಸೂರಜ್‌ 28ಕ್ಕೆ4, ಚೇತನ್‌ 31ಕ್ಕೆ2)‌. ಫಲಿತಾಂಶ: ಹೆಡ್‌ಕ್ವಾರ್ಟರ್ಸ್‌ಗೆ 51 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT