
ಬಿಹಾರ ತಂಡದ ಪಿಯೂಷ್ ಕುಮಾರ್
–ಪಿಟಿಐ ಚಿತ್ರ
ಪಾಟ್ನಾ: ಬಿಹಾರ ಕ್ರಿಕೆಟ್ ತಂಡವು ಸೋಮವಾರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪ್ಲೇಟ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಎಲೀಟ್ ಗುಂಪಿಗೆ ಬಡ್ತಿ ಪಡೆಯಿತು.
ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಿಹಾರ ತಂಡವು ಮಣಿಪುರದ ಎದುರು 568 ರನ್‌ಗಳ ಬೃಹತ್ ಅಂತರದಿಂದ ಜಯಿಸಿತು. ಅದರೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
14ರ ಪೋರ ವೈಭವ್ ಸೂರ್ಯವಂಶಿಯ ಗೈರು ಹಾಜರಿಯಲ್ಲಿ ಬಿಹಾರ ತಂಡದ ಗೆಲುವಿಗೆ ಪಿಯೂಷ್ ಸಿಂಗ್ (216; 322ಎ, 4X20) ಅವರು ಬಲ ತುಂಬಿದರು. ಖಾಲೀದ್ ಆಲಂ (81ರನ್), ಬಿಪಿನ್ ಸೌರಭ್ (52 ರನ್) ಮತ್ತು ರಘುವೇಂದ್ರ ಪ್ರತಾಪ್ ಸಿಂಗ್ (90 ರನ್) ಅವರೂ ತಮ್ಮ ಕಾಣಿಕೆ ನೀಡಿದರು. ಬಿಹಾರವು ಮಣಿಪುರ ತಂಡಕ್ಕೆ 764 ರನ್‌ಗಳ ಕಡುಕಠಿಣ ಗುರಿಯೊಡ್ಡಿತು. ಮಣಿಪುರ ತಂಡಕ್ಕೆ 195 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
2022–23ರ ಋತುವಿನ ನಂತರ ಬಿಹಾರವು ಎಲೀಟ್‌ನಿಂದ ಪ್ಲೇಟ್ ಗುಂಪಿಗೆ ಜಾರಿತ್ತು. ಈ ಬಾರಿ ಮತ್ತೆ ಎಲೀಟ್ ಗುಂಪಿಗೆ ಮರಳಿದೆ.
ಮೊದಲ ಇನಿಂಗ್ಸ್: ಬಿಹಾರ:135.5 ಓವರ್‌ಗಳಲ್ಲಿ 522. ಮಣಿಪುರ: 89.1 ಓವರ್‌ಗಳಲ್ಲಿ 264.
ಎರಡನೇ ಇನಿಂಗ್ಸ್: ಬಿಹಾರ: 119.3 ಓವರ್‌ಗಳಲ್ಲಿ 6ಕ್ಕೆ505 ಡಿಕ್ಲೇರ್ಡ್ (ಪಿಯೂಷ್ ಸಿಂಗ್ 216, ಮಂಗಲ್ ಮೆಹರೋರ್ 31, ಖಾಲೀದ್ ಆಲಂ 81, ಬಿಪಿನ ಸೌರಭ್ 52, ರಘುವೇಂದ್ರ ಪ್ರತಾಪ್ ಸಿಂಗ್ 90, ಫಿರೊಜ್ಯಾಮ್ ಜೊತಿನ್ 85ಕ್ಕ3)
ಮಣಿಪುರ: 56.1 ಓವರ್‌ಗಳಲ್ಲಿ 195 (ಕಮ್ಜೀತ್ ಯುಮನಾಮ್ 23, ಫಿರೊಜ್ಯಾಮ್ ಜೊತಿನ್ 74, ಕಿಶನ್ ಸಿಂಘಾ 30, ಪ್ರಶಾಂತ್ ಸಿಂಗ್ 51ಕ್ಕೆ2, ಸೂರಜ್ ಕಶ್ಯಪ್ 32ಕ್ಕೆ3, ಹಿಮಾಂಶು ಸಿಂಗ್ 49ಕ್ಕೆ3) ಫಲಿತಾಂಶ: ಬಿಹಾರ ತಂಡಕ್ಕೆ 568 ರನ್ ಜಯ. ಪಂದ್ಯದ ಆಟಗಾರ: ಸಕೀಬುಲ್ ಗಣಿ. ಸರಣಿಶ್ರೇಷ್ಠ: ಫಿರೊಜ್ಯಾಮ್ ಜೊತಿನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.