ADVERTISEMENT

ಟೆಸ್ಟ್ ಕ್ರಿಕೆಟ್‌: ಆಸ್ಟ್ರೇಲಿಯಾ ವಿರುದ್ಧ ಸೋಲಿನ ಸುಳಿಯಲ್ಲಿ ವಿಂಡೀಸ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 14:21 IST
Last Updated 10 ಡಿಸೆಂಬರ್ 2022, 14:21 IST
ಸ್ಕಾಟ್‌ ಬೋಲಂಡ್‌ –ಎಎಫ್‌ಪಿ ಚಿತ್ರ
ಸ್ಕಾಟ್‌ ಬೋಲಂಡ್‌ –ಎಎಫ್‌ಪಿ ಚಿತ್ರ   

ಅಡಿಲೇಡ್‌: ಆಲ್‌ರೌಂಡ್‌ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡದವರು ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ.

ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲುವಿಗೆ 497 ರನ್‌ಗಳ ಗುರಿ ಪಡೆದಿರುವ ವಿಂಡೀಸ್‌ ತಂಡ ಮೂರನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ 4 ವಿಕೆಟ್‌ಗೆ 38 ರನ್‌ ಗಳಿಸಿದೆ. ಇನ್ನು ಎರಡು ದಿನಗಳ ಆಟ ಬಾಕಿಯಿದ್ದು, ವಿಂಡೀಸ್‌ ಗೆಲುವಿಗೆ 459 ರನ್‌ಗಳು ಬೇಕಿದೆ.

4 ವಿಕೆಟ್‌ಗೆ 102 ರನ್‌ಗಳಿಂದ ಮೂರನೇ ದಿನದಾಟ ಮುಂದುವರಿಸಿದ ವಿಂಡೀಸ್‌ ಮೊದಲ ಇನಿಂಗ್ಸ್‌ನಲ್ಲಿ 214 ರನ್‌ಗಳಿಗೆ ಅಲೌಟಾಯಿತು. ಎದುರಾಳಿಗೆ ಫಾಲೋಆನ್‌ ನೀಡದೆ ಎರಡನೇ ಇನಿಂಗ್ಸ್‌ ಆಡಿದ ಆತಿಥೇಯರು 31 ಓವರ್‌ಗಳಲ್ಲಿ 6 ವಿಕೆಟ್‌ಗೆ 199 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡರು.

ADVERTISEMENT

ಸ್ಕಾಟ್ ಬೋಲಂಡ್‌ ಅವರು ಎರಡನೇ ಇನಿಂಗ್ಸ್‌ನ ಆರಂಭದಲ್ಲೇ ವಿಂಡೀಸ್‌ಗೆ ಆಘಾತ ನೀಡಿದರು.

ಸಂಕ್ಷಿಪ್ತ ಸ್ಕೋರ್‌
ಮೊದಲ ಇನಿಂಗ್ಸ್‌
ಆಸ್ಟ್ರೇಲಿಯಾ
7 ವಿಕೆಟ್‌ಗೆ 511 ಡಿಕ್ಲೇರ್ಡ್‌
ವೆಸ್ಟ್‌ ಇಂಡೀಸ್‌: 69.3 ಓವರ್‌ಗಳಲ್ಲಿ 214 (ತೇಜ್‌ನಾರಾಯಣ ಚಂದ್ರಪಾಲ್ 47, ಆ್ಯಂಡರ್ಸನ್‌ ಫಿಲಿಪ್‌ 43, ರೋಸ್ಟನ್‌ ಚೇಸ್‌ 34, ನೇಥನ್‌ ಲಿಯೊನ್‌ 57ಕ್ಕೆ 3, ಮೈಕಲ್‌ ನೇಸರ್‌ 34ಕ್ಕೆ 2)

ಎರಡನೇ ಇನಿಂಗ್ಸ್‌
ಆಸ್ಟ್ರೇಲಿಯಾ
31 ಓವರ್‌ಗಳಲ್ಲಿ 6 ವಿಕೆಟ್‌ಗೆ 199 ಡಿಕ್ಲೇರ್ಡ್‌ (ಉಸ್ಮಾನ್‌ ಖವಾಜಾ 45, ಡೇವಿಡ್‌ ವಾರ್ನರ್‌ 28, ಮಾರ್ನಸ್‌ ಲಾಬುಷೇನ್‌ 31, ಸ್ಟೀವ್‌ ಸ್ಮಿತ್‌ 35, ಟ್ರ್ಯಾವಿಸ್‌ ಹೆಡ್‌ ಔಟಾಗದೆ 38, ಅಲ್ಜರಿ ಜೋಸೆಫ್‌ 33ಕ್ಕೆ 3, ರೋಸ್ಟನ್‌ ಚೇಸ್‌ 25ಕ್ಕೆ 2).
ವೆಸ್ಟ್‌ ಇಂಡೀಸ್‌: 22 ಓವರ್‌ಗಳಲ್ಲಿ 4 ವಿಕೆಟ್‌ಗೆ 38 (ತೇಜ್‌ನಾರಾಯಣ ಚಂದ್ರಪಾಲ್ 17, ಸ್ಕಾಟ್‌ ಬೋಲಂಡ್‌ 9ಕ್ಕೆ 3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.