ADVERTISEMENT

ಕ್ರಿಕೆಟ್: ದಕ್ಷಿಣ ಆಫ್ರಿಕಾ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಫಾಫ್ ಡು ಪ್ಲೆಸಿ

ಏಜೆನ್ಸೀಸ್
Published 17 ಫೆಬ್ರುವರಿ 2020, 9:33 IST
Last Updated 17 ಫೆಬ್ರುವರಿ 2020, 9:33 IST
   
""

ಕೇಪ್‌ಟೌನ್‌:ಕ್ರಿಕೆಟಿಗ ಫಾಫ್‌ ಡು ಪ್ಲೆಸಿ ದಕ್ಷಿಣ ಆಫ್ರಿಕಾ ತಂಡದ ಮೂರು ಮಾದರಿಯ (ಟೆಸ್ಟ್‌, ಏಕದಿನ, ಟಿ20)ನಾಯಕತ್ವವನ್ನು ತ್ಯಜಿಸಿದ್ದು,ಸಾಮಾನ್ಯ ಆಟಗಾರನಾಗಿ ಮುಂದುವರಿಯಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ (ಸಿಎಸ್‌ಎ) ತಿಳಿಸಿದೆ.

ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ತಾವು ನಾಯಕತ್ವದಿಂದ ಕೆಳಗಿಳಿಯುವುದಾಗಿ ಪ್ಲೆಸಿ ಹೇಳಿದ್ದಾರೆ. ಸದ್ಯ ತವರಿನಲ್ಲಿ ನಡೆಯುತ್ತಿರುವ ಏಕದಿನ ಮತ್ತು ಟಿ20 ಸರಣಿಯಿಂದ ಪ್ಲೆಸಿ ವಿಶ್ರಾಂತಿ ಪಡೆದಿದ್ದಾರೆ. ಅವರ ಬದಲು ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾನ್‌ ತಂಡ ಮುನ್ನಡೆಸುತ್ತಿದ್ದಾರೆ.

‘ಹೊಸ ನಾಯಕರು ಮತ್ತು ಯುವ ಆಟಗಾರರನ್ನೊಳಗೊಂಡ ತಂಡವು ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಹೀಗಿರುವಾಗಲೇ ನಾನು ಎಲ್ಲ ಮಾದರಿಯ ನಾಯಕತ್ವವನ್ನು ತ್ಯಜಿಸುವುದು, ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಹಿತದೃಷ್ಟಿಯಿಂದ ಒಳ್ಳೆಯದು’ ಎಂದು ಪ್ಲೆಸಿ ಹೇಳಿಕೆ ನೀಡಿದ್ದರು.

ADVERTISEMENT

ಮುಂದುವರಿದು, ‘ಇದು ನಾನು ಕೈಗೊಂಡ ಅತ್ಯಂತ ಕಠಿಣ ನಿರ್ಧಾರವಾಗಿದೆ. ಆದರೆ, ಕ್ವಿಂಟನ್‌ಗೆ ಎಲ್ಲ ರೀತಿಯ ಬೆಂಬಲ ನೀಡಲು ಬದ್ಧನಾಗಿರುತ್ತೇನೆ’ ಎಂದೂ ತಿಳಿಸಿದ್ದರು.

2019 ವಿಶ್ವಕಪ್‌ ಟೂರ್ನಿಯಲ್ಲಿ ಪ್ಲೆಸಿ ನೇತೃತ್ವದ ಆಫ್ರಿಕಾ ತಂಡ ಗುಂಪು ಹಂತದಿಂದಲೇ ಹೊರಬಂದಿತ್ತು. ಅದಾದ ಬಳಿಕ ಭಾರತ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ ವಾಷ್ ಮತ್ತು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ 1–3ರಿಂದ ಟೆಸ್ಟ್‌ ಸರಣಿ ಸೋಲು ಅನುಭವಿಸಿತ್ತು.

ಮಾತ್ರವಲ್ಲದೆ,ಬ್ಯಾಟಿಂಗ್‌ನಲ್ಲಿಯೂ ವೈಫಲ್ಯ ಅನುಭವಿಸಿರುವ ಅವರು, ಕಳೆದ 14 ಟೆಸ್ಟ್ ಇನಿಂಗ್ಸ್‌ಗಳಲ್ಲಿ ಅವರು ಕೇವಲ 20.92 ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಹೀಗಾಗಿ ಒತ್ತಡಕ್ಕೆ ಒಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.