ADVERTISEMENT

ಐಪಿಎಲ್ ರದ್ದಾದರೆ ಅವಮಾನ: ಜೋಸ್ ಬಟ್ಲರ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 19:30 IST
Last Updated 7 ಏಪ್ರಿಲ್ 2020, 19:30 IST
ಜೋಸ್ ಬಟ್ಲರ್
ಜೋಸ್ ಬಟ್ಲರ್   

ಲಂಡನ್ : ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಬಹಳ ದೊಡ್ಡದು. ಕೊವಿಡ್‌ –19 ಕಾರಣಕ್ಕಾಗಿ ಈ ಟೂರ್ನಿಯು ನಡೆಯದೇ ಹೋದರೆ ಅದು ಅವಮಾನಕರ ಸಂಗತಿ. ಆದ್ದರಿಂದ ಈ ವರ್ಷದ ಬೇರೆ ತಿಂಗಳಲ್ಲಿ ಟೂರ್ನಿ ನಡೆಸಬೇಕು ಎಂದು ಇಂಗ್ಲೆಂಡ್ ತಂಡದ ಕ್ರಿಕೆಟಿಗ ಜೋಸ್ ಬಟ್ಲರ್ ಹೇಳಿದ್ದಾರೆ.

ರಾಜಸ್ಥಾನ್ ರಾಯಲ್ಸ್‌ ತಂಡವನ್ನು ಪ್ರತಿನಿಧಿಸುವ ಬಟ್ಲರ್, ‘ಈ ಸಂದರ್ಭದಲ್ಲಿ ಟೂರ್ನಿಯನ್ನು ನಡೆಸುವುದು ಸಮಂಜಸವಲ್ಲ. ಎಲ್ಲವೂ ಅನಿಶ್ವಿತವಾಗಿದೆ. ಆದ್ದರಿಂದ ಆಯೋಜಕರು ಒಂದು ನಿರ್ಧಾರಕ್ಕೆ ಬರಬೇಕು. ಒಟ್ಟಿನಲ್ಲಿ ಈ ವರ್ಷ ಐಪಿಎಲ್ ನಡೆಸಲು ಸಾಧ್ಯವಾಗಬೇಕು’ ಎಂದಿದ್ದಾರೆ.

‘ಆರ್ಥಿಕ ಹಿನ್ನೆಲೆಯಲ್ಲಿ ನೋಡಿದಾಗಿ ಇದೊಂದು ಬೃಹತ್ ಟೂರ್ನಿಯಾಗಿದೆ. ಕ್ರಿಕೆಟ್‌ ಕ್ಷೇತ್ರದಲ್ಲಿಯೇ ಮಹತ್ವದ ಟೂರ್ನಿಯಾಗಿದೆ. ಒಂದೊಮ್ಮೆ ಅದನ್ನು ಕೈಬಿಟ್ಟರೆ ಅದಕ್ಕಿಂತ ಅವಮಾನ ಇನ್ನೇನಿದೆ? ಆದ್ದರಿಂದ ಮುಂದೂಡಿಕೆಯೇ ಸಮಂಜಸ’ ಎಂದು ಬಟ್ಲರ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.