ADVERTISEMENT

ಬ್ರಾತ್‌ವೇಟ್‌ಗೆ ವಾಗ್ದಂಡನೆ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 14:10 IST
Last Updated 15 ಜೂನ್ 2019, 14:10 IST
   

ಲಂಡನ್‌: ಸೌತಾಂಪ್ಟನ್‌ನಲ್ಲಿ ಶುಕ್ರವಾರ ಇಂಗ್ಲೆಂಡ್‌ ವಿರುದ್ಧ ಪಂದ್ಯದ ವೇಳೆ ಅಂಪೈರ್‌ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ವೆಸ್ಟ್ ಇಂಡೀಸ್‌ ಆಲ್‌ರೌಂಡರ್‌ ಕಾರ್ಲೋಸ್‌ ಬ್ರಾತ್‌ವೇಟ್‌ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ.

ವೆಸ್ಟ್‌ ಇಂಡೀಸ್‌ ಇನಿಂಗ್ಸ್‌ನ ವೇಳೆ ಅವರು 14 ರನ್‌ ಗಳಿಸಿದ್ದಾಗ ಅಂಪೈರ್‌ ಔಟ್‌ ನೀಡಿದ್ದು, ಇದಕ್ಕೆ ಬ್ರಾತ್‌ವೇಟ್‌ ಅಸಮಾಧಾನ ಸೂಚಿಸಿದ್ದರು. ಮ್ಯಾಚ್‌ ರೆಫ್ರಿ ಡೇವಿಡ್‌ ಬೂನ್‌ ಎದುರು ಅವರು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ವಿಚಾರಣೆ ನಡೆಸದಿರಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.