ADVERTISEMENT

ಕೆಎಸ್‌ಸಿಎ ಕಾರ್ಯದರ್ಶಿ ಮನೆ ಮೇಲೆ ಸಿಸಿಬಿ ದಾಳಿ

ಕೆಪಿಎಲ್ ಕ್ರಿಕೆಟ್‌: ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಹಗರಣ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 19:36 IST
Last Updated 19 ಡಿಸೆಂಬರ್ 2019, 19:36 IST
ಸಂತೋಷ್‌ ಮೆನನ್‌
ಸಂತೋಷ್‌ ಮೆನನ್‌   

ಬೆಂಗಳೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್) ಕ್ರಿಕೆಟ್‌ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣದ ಸಂಬಂಧ ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಮನೆ ಮೇಲೆ ಸಿಸಿಬಿ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.

ಸದಾಶಿವನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಜಯನಗರದಲ್ಲಿರುವ ಮೆನನ್‌ ಮನೆಗೆ ಬೆಳಿಗ್ಗೆ 7 ಗಂಟೆಗೆ ತೆರಳಿದ ಸಿಸಿಬಿ ಪೊಲೀಸರು, ಮಧ್ಯಾಹ್ನ 2 ಗಂಟೆ ವರೆಗೆ ಶೋಧ ನಡೆಸಿದರು. ಈ ವೇಳೆ ಕೆಲವು ಮಹತ್ವದ ದಾಖಲೆ ಪತ್ರಗಳು ಮತ್ತು ಎಲೆಕ್ಟ್ರಾನಿಕ್‌ ವಸ್ತು ಗಳನ್ನು ವಶಕ್ಕೆ ಪಡೆದರು ಎಂದು ಗೊತ್ತಾಗಿದೆ.

ಮನೆಯಲ್ಲಿ ತೀವ್ರ ವಿಚಾರಣೆ ನಡೆ ಸಿದ ಸಿಸಿಬಿ ಪೊಲೀಸರು, ಶುಕ್ರವಾರ ಮತ್ತೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ADVERTISEMENT

‘ನ್ಯಾಯಾಲಯದಿಂದ ಸರ್ಚ್‌ ವಾರೆಂಟ್ ಪಡೆದು ದಾಳಿ ನಡೆಸಲಾಗಿದೆ’ ಎಂದು ಸಿಸಿಬಿ ಜಂಟಿ ಪೊಲೀಸ್ ಕಮಿಷ ನರ್‌ ಸಂದೀಪ ಪಾಟೀಲ ತಿಳಿಸಿದರು.

ಕೆಎಸ್‌ಸಿಎ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೆನನ್, ಪ್ರತ್ಯೇಕವಾಗಿ ಕ್ರಿಕೆಟ್ ಕೋಚಿಂಗ್ ಸೆಂಟರ್ ಆರಂಭಿಸಿದ್ದರು.16 ಹಾಗೂ 19 ವಯೋಮಾನದ ಆಟಗಾರರನ್ನು ಅಕ್ರಮವಾಗಿ ರಣಜಿ ತಂಡಕ್ಕೆ ಆಯ್ಕೆ ಮಾಡುತ್ತಿದ್ದ ಆರೋಪ ಮೆನನ್‌ ಮೇಲಿತ್ತು. ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿ ಅವರನ್ನು ಬುಧವಾರ ಸಿಸಿಬಿ ಕಚೇರಿಗೆ ಕರೆದು, ತೀವ್ರ ವಿಚಾರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.