ADVERTISEMENT

Clown Kohli: ಕಿಂಗ್ ಕೊಹ್ಲಿಗೆ ಆಸೀಸ್ ಮಾಧ್ಯಮಗಳಿಂದ ವ್ಯಂಗ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2024, 10:14 IST
Last Updated 27 ಡಿಸೆಂಬರ್ 2024, 10:14 IST
<div class="paragraphs"><p>ಎಕ್ಸ್ ಚಿತ್ರ</p></div>

ಎಕ್ಸ್ ಚಿತ್ರ

   

ಮೆಲ್ಬರ್ನ್: ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್ ಕೊನ್‌ಸ್ಟಸ್ ಅವರ ಭುಜಕ್ಕೆ ಡಿಕ್ಕಿ ಹೊಡೆದ ಭಾರತದ ಆಟಗಾರ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿರಾಟ್ ಕೊಹ್ಲಿ ಅವರನ್ನು ಕೋಡಂಗಿಗೆ ಹೋಲಿಸುವ ಮೂಲಕ ಆಸೀಸ್ ಮಾಧ್ಯಮಗಳು ವ್ಯಂಗ್ಯ ಮಾಡಿವೆ.

ADVERTISEMENT

'ದಿ ವೆಸ್ಟ್ ಆಸ್ಟ್ರೇಲಿಯನ್' ಪತ್ರಿಕೆಯಲ್ಲಿ ಕೊಹ್ಲಿ ಅವರನ್ನು ಹೀಯಾಳಿಸಲಾಗಿದೆ. 19 ವರ್ಷದ ಯುವ ಆಟಗಾರನ ಪದಾರ್ಪಣೆ ಪಂದ್ಯದಲ್ಲಿ ಅತಿರೇಕದ ವರ್ತನೆ ತೋರಿದ ಕೊಹ್ಲಿ ಅವರನ್ನು ಹೇಡಿ ಎಂದು ಜರಿಯಲಾಗಿದೆ.

ಈ ಮೊದಲು ಆಸ್ಟ್ರೇಲಿಯಾದ ಕ್ರಿಕೆಟ್ ವಿಶ್ಲೇಷಕರು, ಪಂಡಿತರು ಹಾಗೂ ಮಾಜಿ ಆಟಗಾರರು ಕೊಹ್ಲಿ ವರ್ತನೆಯನ್ನು ಬಲವಾಗಿ ಖಂಡಿಸಿದ್ದರಲ್ಲದೆ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದರು.

ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಮಾಧ್ಯಮಗಳಲ್ಲೂ ಕೊಹ್ಲಿ ವಿರುದ್ಧ ಲೇಖನ ಪ್ರಕಟಗೊಂಡಿದೆ.

ಕೊಹ್ಲಿ ಅವರನ್ನು ಹೀಯಾಳಿಸಿ ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಚಿತ್ರವನ್ನು ಭಾರತದ ಮಾಜಿ ಕ್ರಿಕೆಟಿಗರು ವಿರೋಧಿಸಿದ್ದಾರೆ. ಕ್ರಿಕೆಟ್ ವಿಶ್ಲೇಷಕರಾದ ಸುನಿಲ್ ಗವಾಸ್ಕರ್, ಇರ್ಫಾನ್ ಪಠಾಣ್ ಈ ಕುರಿತು ಪ್ರತಿಕ್ರಿಯಿಸಿದ್ದು, ಆಸ್ಟ್ರೇಲಿಯಾದವರು ದ್ವಂದ್ವ ನಿಲುವನ್ನು ಹೊಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಸ್ಯಾಮ್ ಕೊನ್‌ಸ್ಟಸ್ ಅವರ ಭುಜಕ್ಕೆ ಪರಸ್ಪರ ಡಿಕ್ಕಿಯಾಗಿ ವಾಗ್ವಾದ ನಡೆಸಿದ್ದ ಕೊಹ್ಲಿ ಅವರಿಗೆ ದಂಡ ಹಾಗೂ ಡಿಮೆರಿಟ್ ಪಾಯಿಂಟ್ ವಿಧಿಸಲಾಗಿತ್ತು.

ಐಸಿಸಿ ನಿಯಮಾವಳಿಯ ಲೆವೆನ್ ಒನ್ ಉಲ್ಲಂಘನೆಯ ಅಡಿಯಲ್ಲಿ ಕೊಹ್ಲಿಗೆ ದಂಡ ವಿಧಿಸಲಾಗಿತ್ತು. ಪಂದ್ಯ ಶುಲ್ಕದ ಶೇ 20 ಮತ್ತು ಒಂದು ಡಿಮೆರಿಟ್ ಪಾಯಿಂಟ್ ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.