ADVERTISEMENT

ಕುರುವಿಲಾ ವಿರುದ್ಧ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ದೂರು

ಪಿಟಿಐ
Published 26 ಡಿಸೆಂಬರ್ 2020, 20:47 IST
Last Updated 26 ಡಿಸೆಂಬರ್ 2020, 20:47 IST
ಬಿಸಿಸಿಐ ಲೋಗೊ
ಬಿಸಿಸಿಐ ಲೋಗೊ   

ಮುಂಬೈ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಸದಸ್ಯ ಅಬೆ ಕುರುವಿಲಾ ವಿರುದ್ಧ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ದೂರು ದಾಖಲಾಗಿದೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಮಾಜಿ ಸದಸ್ಯ ಸಂಜೀವ್‌ ಗುಪ್ತಾ ಅವರು ಬಿಸಿಸಿಐನ ನೀತಿ ಅಧಿಕಾರಿ ಡಿ.ಕೆ.ಜೈನ್ ಅವರಿಗೆ ಈ ಕುರಿತು ದೂರು ನೀಡಿದ್ದಾರೆ.

ಕುರುವಿಲಾ ಅವರು ರಾಷ್ಟ್ರೀಯ ತಂಡದ ಆಯ್ಕೆಗಾರರ ಹುದ್ದೆಯ ಜೊತೆಗೆ ಮಹಾರಾಷ್ಟ್ರದ ಡಿ.ವೈ. ಪಾಟೀಲ್ ಅಕಾಡೆಮಿಯ ಕ್ರೀಡಾ ನಿರ್ದೇಶಕರಾಗಿದ್ದಾರೆ ಎಂಬುದು ಗುಪ್ತಾ ಅವರ ಆರೋಪವಾಗಿದೆ.

ಭಾರತ ತಂಡದ ಪರ 10 ಟೆಸ್ಟ್ ಮತ್ತು 25 ಏಕದಿನ ಪಂದ್ಯಗಳನ್ನು ಆಡಿರುವ ಕುರುವಿಲಾ, ಗುರುವಾರ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಗೆ ನೇಮಕಗೊಂಡಿದ್ದಾರೆ.

ADVERTISEMENT

ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಅಧ್ಯಕ್ಷ ವಿಜಯ್ ಪಾಟೀಲ್ ವಿರುದ್ಧವೂ ಗುಪ್ತಾ ಇದೇ ವಿಷಯದಲ್ಲಿ ದೂರು ದಾಖಲಿಸಿದ್ದಾರೆ.ಪಾಟೀಲ್‌, 2019ರ ಅಕ್ಟೋಬರ್‌ನಲ್ಲಿ ಎಂಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.