
ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಅಕ್ಷತ್ ಪ್ರಭಾಕರ್ ಅವರ ಐದು ವಿಕೆಟ್ ಗೊಂಚಲಿನ ನೆರವಿನಿಂದ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಒಡಿಶಾ ತಂಡವನ್ನು 170 ರನ್‌ಗಳಿಗೆ ಆಲೌಟ್ ಮಾಡಿ ಮೇಲುಗೈ ಸಾಧಿಸಿತು.
ಒಡಿಶಾದ ಬಲಾಂಗಿರ್‌ನಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಅಕ್ಷತ್ (35ಕ್ಕೆ5) ಹಾಗೂ ಈಶ ಪುತ್ತಿಗೆ (52ಕ್ಕೆ3) ಅವರು ಬಿಗುವಿನ ಬೌಲಿಂಗ್ ಮೂಲಕ ಎದುರಾಳಿ ತಂಡದ ಯೋಜನೆಯನ್ನು ವಿಫಲಗೊಳಿಸಿದರು. ಆರಂಭ ಆಟಗಾರ ಅಭಿರೂಪ್ ದಾಸ್ (39; 109ಎ) ಹೊರತುಪಡಿಸಿ, ಉಳಿದ್ಯಾವ ಬ್ಯಾಟರ್‌ಗಳೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಬಳಿಕ, ಬ್ಯಾಟಿಂಗ್ ಆರಂಭಿಸಿದ ಅನ್ವಯ್ ದ್ರಾವಿಡ್ ಪಡೆಯು, ದಿನದಾಟದ ಅಂತ್ಯಕ್ಕೆ 17 ಓವರ್‌ಗಳಲ್ಲಿ 1 ವಿಕೆಟ್‌ಗೆ 50 ರನ್ ಗಳಿಸಿದೆ. ಧ್ರುವ್ ಕೃಷ್ಣನ್ (ಔಟಾಗದೇ 31) ಹಾಗೂ ಮಣಿಕಂಠ ಶಿವಾನಂದ (ಔಟಾಗದೇ 9) ಬುಧವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರು: ಒಡಿಶಾ: 58.4 ಓವರ್‌ಗಳಲ್ಲಿ 170 (ಅಭಿರೂಪ್ ದಾಸ್ 39, ಆದಿತ್ಯ ರಂಜನ್ ರೈ 31; ಅಕ್ಷತ್ ಪ್ರಭಾಕರ್ 35ಕ್ಕೆ5), ಈಶಾ ಪುತ್ತಿಗೆ 52ಕ್ಕೆ3. ಕರ್ನಾಟಕ: 17 ಓವರ್‌ಗಳಲ್ಲಿ 1 ವಿಕೆಟ್‌ಗೆ 50 (ಧ್ರುವ್ ಕೃಷ್ಣನ್ ಔಟಾಗದೇ 31, ಮಣಿಕಂಠ ಶಿವಾನಂದ ಔಟಾಗದೇ 9; ಸಿಬುನ್ ನಂದಾ 27ಕ್ಕೆ1).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.