ADVERTISEMENT

ಕ್ರಿಕೆಟ್‌: ಸೋಲಿನ ಸುಳಿಯಲ್ಲಿ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 19:45 IST
Last Updated 20 ಜನವರಿ 2020, 19:45 IST
ಲೋಚನ್‌ ಎಸ್.ಗೌಡ
ಲೋಚನ್‌ ಎಸ್.ಗೌಡ    

ಮೈಸೂರು: ಕರ್ನಾಟಕ ತಂಡದವರು, ಕೇರಳ ವಿರುದ್ಧದ ಕೂಚ್‌ ಬಿಹಾರ್‌ ಟ್ರೋಫಿ (19 ವರ್ಷ ವಯಸ್ಸಿನೊಳ ಗಿನವರ) ಕ್ರಿಕೆಟ್‌ ಟೂರ್ನಿಯಲ್ಲಿ ಸೋಲಿನ ಸುಳಿಗೆ ಸಿಲುಕಿದ್ದಾರೆ.‌

ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಸೋಮವಾರ 273 ರನ್‌ಗಳ ಗುರಿ ಬೆನ್ನಟ್ಟಿರುವ ಆತಿಥೇಯರು ದ್ವಿತೀಯ ಇನಿಂಗ್ಸ್‌ನಲ್ಲಿ 47.1 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 109 ರನ್‌ ಗಳಿಸಿ ಸಂಕಷ್ಟದಲ್ಲಿದ್ದಾರೆ. ಪಂದ್ಯದ ಕೊನೆಯ ದಿನವಾದ ಮಂಗಳವಾರ ಈ ತಂಡ ಗೆಲ್ಲಲು ಇನ್ನೂ 164 ರನ್‌ ಗಳಿಸಬೇಕಿದೆ. ಕೈಯಲ್ಲಿರುವ ವಿಕೆಟ್‌ಗಳು ಕೇವಲ ನಾಲ್ಕು.

ಆರಂಭಿಕ ಬ್ಯಾಟ್ಸ್‌ಮನ್‌ ಲೋಚನ್‌ ಎಸ್.ಗೌಡ 54 ರನ್‌ ಗಳಿಸಿ ಪ್ರತಿರೋಧವೊಡ್ಡಿದರು. ಆದರೆ, ಕೇರಳ ತಂಡದ ಮೋಹಿತ್‌ ಶಿಬು ಹಾಗೂ ಕಿರಣ್‌ ಸಾಗರ್ ಪರಿಣಾಮಕಾರಿ ಬೌಲಿಂಗ್‌ ಮೂಲಕ ಉಳಿದವರನ್ನು ನಿಯಂತ್ರಿಸಿದರು.

ಸಂಕ್ಷಿಪ್ತ ಸ್ಕೋರ್‌: ಕೇರಳ: ಮೊದಲ ಇನಿಂಗ್ಸ್‌ 194 ಹಾಗೂ 98 ಓವರ್‌ಗಳಲ್ಲಿ 199 (ನಿಖಿಲ್ ಜೋಸ್‌ 54, ಆದಿತ್ಯ ಕೃಷ್ಣನ್‌ 42; ತಹಾ ಖಾನ್‌ 52ಕ್ಕೆ6); ಕರ್ನಾಟಕ: ಮೊದಲ ಇನಿಂಗ್ಸ್‌ 121 ಹಾಗೂ 47.1 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 109 (ಲೋಚನ್‌ ಎಸ್‌.ಗೌಡ 54, ಎನ್‌.ಎ.ಚಿನ್ಮಯ್‌ ಬ್ಯಾಟಿಂಗ್‌ 10; ಮೋಹಿತ್‌ ಶಿಬು 25ಕ್ಕೆ2, ಕಿರಣ್‌ ಸಾಗರ್ 34ಕ್ಕೆ4).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.