ADVERTISEMENT

ಕೂಚ್ ಬಿಹಾರ್ ಟ್ರೋಫಿ: ಹಾರ್ದಿಕ್ ರಾಜ್ ಮಿಂಚು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 16:37 IST
Last Updated 9 ಡಿಸೆಂಬರ್ 2023, 16:37 IST
ಹಾರ್ದಿಕ್‌ ರಾಜ್ ಬ್ಯಾಟಿಂಗ್‌ ಭಂಗಿ
ಹಾರ್ದಿಕ್‌ ರಾಜ್ ಬ್ಯಾಟಿಂಗ್‌ ಭಂಗಿ   

ಮೈಸೂರು: ಕರ್ನಾಟಕದ ಹಾರ್ದಿಕ್ ರಾಜ್ ಸಿಡಿಸಿದ ಅಮೋಘ ಅರ್ಧ ಶತಕದ (ಅಜೇಯ 67 ರನ್) ಬಲದಿಂದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತರ ಪ್ರದೇಶ ವಿರುದ್ಧ 235 ರನ್ ಮೊತ್ತ ಕಲೆಹಾಕಿತು.

ಇಲ್ಲಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಶನಿವಾರ ರಾಜ್ಯ ತಂಡವು 78 ಓವರ್ ಗಳಲ್ಲಿ 234 ರನ್ ಗಳಿಸಿ, 5 ರನ್ ಗಳ ಹಿನ್ನಡೆ ಅನುಭವಿಸಿತು.

ಎಸ್.ಇಶಾನ್ (18 ರನ್) ಅವರೊಂದಿಗೆ 10 ನೇ ವಿಕೆಟ್ ಜೊತೆಯಾಟದಲ್ಲಿ 58 ರನ್ ಗಳು ತಂಡಕ್ಕೆ ಹರಿದು ಬಂದವು. ಇದರೊಂದಿಗೆ ಅಲ್ಪ ಮೊತ್ತಕ್ಕೆ ತಂಡವು‌ ಕುಸಿಯುವ ಭೀತಿಯನ್ನು ತಪ್ಪಿಸಿದರು. ಇದಕ್ಕೂ ಮೊದಲು ಕೆ.ಪಿ.ಕಾರ್ತಿಕೇಯ 49 ರನ್ ಕಾಣಿಕೆ ನೀಡಿದರು.

ADVERTISEMENT

5 ರನ್ ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ ತಂಡಕ್ಕೆ ಕರ್ನಾಟಕದ ಬೌಲರ್ ಎನ್.ಸಮರ್ಥ್ ಆರಂಭಿಕ ಆಘಾತ ನೀಡಿದರು. ಮಾನವ್ ಸಿಂಧು (0), ಇನ್ಜಮಾಮ್ ಹುಸೇನ್ (6 ರನ್), ನಾಯಕ ಯಶುಪ್ರಧಾನ್ (4 ರನ್) ವಿಕೆಟ್ ಕಿತ್ತರು. ಎರಡನೇ ದಿನದಾಟದ ಅಂತ್ಯಕ್ಕೆ ಉತ್ತರ ಪ್ರದೇಶ ತಂಡ 3 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು

ಉತ್ತರ ಪ್ರದೇಶ ಮೊದಲ ಇನಿಂಗ್ಸ್: 77 ಓವರ್ ಗಳಲ್ಲಿ 239. ಕರ್ನಾಟಕ ಮೊದಲ ಇನ್ನಿಂಗ್ಸ್ 78 ಓವರ್ ಗಳಲ್ಲಿ 235 ರನ್ (ಹಾರ್ದಿಕ್ ಔಟಾಗದೇ 67, ಕೆ.ಪಿ.ಕಾರ್ತಿಕೇಯ 49. ಶುಭಂ ಮಿಶ್ರಾ 48ಕ್ಕೆ 3).

ಉತ್ತರ ಪ್ರದೇಶ ಎರಡನೇ ಇನ್ನಿಂಗ್ಸ್: 3ಕ್ಕೆ 47 ರನ್. (ಕಾವ್ಯ ಥಿಯೊಟಿಯಾ ಔಟಾಗದೇ 26 ರನ್. ಸಮರ್ಥ್ 16ಕ್ಕೆ 3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.