
ಬೆಂಗಳೂರು: ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ ಎಲೈಟ್ ಸಿ ಗುಂಪಿನ ಪಂದ್ಯದ ಎರಡನೇ ದಿನವಾದ ಸೋಮವಾರ ಹಿಮಾಚಲ ಪ್ರದೇಶದ ವಿರುದ್ಧ 35 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡದ 162 ರನ್‌ಗಳಿಗೆ ಉತ್ತರವಾಗಿ ಭಾನುವಾರ 1 ವಿಕೆಟ್‌ಗೆ 36 ರನ್ ಗಳಿಸಿದ್ದ ಕರ್ನಾಟಕ 197 ರನ್ ಹೊಡೆಯಿತು. ಆತಿಥೇಯರ ಪರ ಆದೇಶ ಅರಸ್ 179 ಎಸೆತಗಳ ಇನಿಂಗ್ಸ್‌ನಲ್ಲಿ 61 ರನ್ ಗಳಿಸಿ ಹೋರಾಟ ಪ್ರದರ್ಶಿಸಿದರು. ಧ್ರುವ್ ಕೃಷ್ಣನ್ 38 ಮತ್ತು ಅಕ್ಷತ್ ಪ್ರಭಾಕರ್ 28 ರನ್ ಗಳಿಸಿದರು.
ದಿನದಾಟದ ಕೊನೆಗೆ ಹಿಮಾಚಲ ಪ್ರದೇಶ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 69 ರನ್ ಗಳಿಸಿದೆ. 34 ರನ್‌ಗಳ ಮುನ್ನಡೆ ಹೊಂದಿದೆ.
ಸಂಕ್ಷಿಪ್ತ ಸ್ಕೋರು: ಹಿಮಾಚಲ ಪ್ರದೇಶ: 162 ಮತ್ತು 27 ಓವರುಗಳಲ್ಲಿ 2 ವಿಕೆಟ್‌ಗೆ 69 (ವಾತ್ಸವ್ ಆರ್.ಗಾರ್ಗ್ 28, ಅರ್ಪಿತ್ ಸಿಂಗ್ 30); ಕರ್ನಾಟಕ: 76.2 ಓವರುಗಳಲ್ಲಿ 197 (ಆದೇಶ್ ಡಿ ಅರಸ್ 61, ಧ್ರುವ್ ಕೃಷ್ಣನ್ 38, ಅಕ್ಷತ್ ಪ್ರಭಾಕರ್ 28; ಅಕ್ಷಯ್ ಪಿ.ವಶಿಷ್ಟ್ 37ಕ್ಕೆ4, ನೌನಿಹಾಲ್ ಆರ್. 48ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.