ADVERTISEMENT

ಕೋವಿಡ್‌ ವಿರುದ್ಧ ಹೋರಾಟ: ಸಹಾಯ ಹಸ್ತ ಚಾಚಿದ ಅಪೂರ್ವಿ

ಪಿಟಿಐ
Published 2 ಏಪ್ರಿಲ್ 2020, 19:45 IST
Last Updated 2 ಏಪ್ರಿಲ್ 2020, 19:45 IST
ಅಪೂರ್ವಿ ಚಾಂಡೇಲಾ
ಅಪೂರ್ವಿ ಚಾಂಡೇಲಾ   

ನವದೆಹಲಿ: ಶೂಟರ್‌ ಅಪೂರ್ವಿ ಚಾಂಡೇಲಾ ಹಾಗೂ ಭಾರತ ಕ್ರಿಕೆಟ್‌ ತಂಡದ ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ಅವರೂ ಕೋವಿಡ್‌ ಪೀಡಿತರಿಗೆ ನೆರವಿನ ಹಸ್ತ ಚಾಚಿದ್ದಾರೆ.

ಅಪೂರ್ವಿ ಮತ್ತು ಶ್ರೀಧರ್‌ ಅವರು ಕ್ರಮವಾಗಿ ₹5 ಹಾಗೂ ₹4 ಲಕ್ಷ ದೇಣಿಗೆ ನೀಡಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ರೈಫಲ್‌ ಶೂಟರ್‌ ಅಪೂರ್ವಿ ಅವರು ಪ್ರಧಾನ ಮಂತ್ರಿಗಳ ‘ಕೇರ್ಸ್‌’ ನಿಧಿಗೆ ₹3 ಲಕ್ಷ ಹಾಗೂ ರಾಜಸ್ಥಾನದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹2 ಲಕ್ಷ ಕೊಟ್ಟಿದ್ದಾರೆ.

ADVERTISEMENT

‘ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯವನ್ನು ಪಾಲಿಸಲು ಮುಂದಾಗಿದ್ದೇನೆ. ಪ್ರಧಾನ ಮಂತ್ರಿಗಳ ‘ಕೇರ್ಸ್‌’ ನಿಧಿಗೆ ₹2 ಲಕ್ಷ, ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹1.5 ಲಕ್ಷ ಹಾಗೂ ಸಿಕಂದರಾಬಾದ್‌ ಕಂಟೋನ್ಮೆಂಟ್‌ ಬೋರ್ಡ್‌ಗೆ ₹50 ಸಾವಿರ ದೇಣಿಗೆ ನೀಡಿದ್ದೇನೆ’ ಎಂದು ಶ್ರೀಧರ್‌, ಗುರುವಾರ ಟ್ವೀಟ್‌ ಮಾಡಿದ್ದಾರೆ.

ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯು (ಬಿಎಐ) ₹ 10 ಲಕ್ಷ ದೇಣಿಗೆ ಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.