ADVERTISEMENT

IND vs AUS: ಮೆಲ್ಬರ್ನ್‌ನಲ್ಲಿ ಮೂರನೇ ಟೆಸ್ಟ್ ಸಾಧ್ಯತೆ

ಪಿಟಿಐ
Published 24 ಡಿಸೆಂಬರ್ 2020, 16:35 IST
Last Updated 24 ಡಿಸೆಂಬರ್ 2020, 16:35 IST
ಪ್ಯಾಟ್ ಕಮಿನ್ಸ್
ಪ್ಯಾಟ್ ಕಮಿನ್ಸ್   

ಮೆಲ್ಬರ್ನ್:ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ನಡೆಯಲಿರುವ ಸಿಡ್ನಿಯಲ್ಲಿ ಕೋವಿಡ್–19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

ಆದ್ದರಿಂದ ಮೆಲ್ಬರ್ನ್‌ನಲ್ಲಿಯೇ ಕ್ರೀಡಾಂಗಣವನ್ನು ಮೂರನೇ ಟೆಸ್ಟ್‌ಗಾಗಿ ಕಾಯ್ದಿರಿಸಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಗುರುವಾರ ತಿಳಿಸಿದೆ.

ಇದೇ 26ರಿಂದ ಮೆಲ್ಬರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಡೆಯಲಿದೆ. ಅಗತ್ಯ ಬಿದ್ದರೆ ಜನವರಿ 7ರಿಂದ ನಡೆಯುವ ಮೂರನೇ ಟೆಸ್ಟ್‌ ಅನ್ನೂಇಲ್ಲಿಯ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.