ಬೆಂಗಳೂರು: ತಾವು ಟಿ20 ಬ್ಯಾಟರ್ ಆಗಿ ಪುನರುತ್ಥಾನ ಕಾಣುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೆಂಟರ್ ದಿನೇಶ್ ಕಾರ್ತಿಕ್ ಅವರ ಪ್ರಯತ್ನ ಪ್ರಮುಖವಾಗಿದೆ ಎಂದು ತಂಡದ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಹೇಳಿದರು.
2024ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದಾಗ ಅವರು 14 ಪಂದ್ಯಗಳಲ್ಲಿ ಬರೇ 187 ರನ್ ಗಳಿಸಿದ್ದರು. ‘ಈ ಋತುವಿಗೆ ಮುನ್ನ ಅವರ (ದಿನೇಶ್ ಕಾರ್ತಿಕ್) ಜೊತೆ ಕಠಿಣ ಶ್ರಮ ಹಾಕಿದೆ.
ಈಗ ನಾನು ಅವರ ರೀತಿಯಲ್ಲೇ ಆಡತೊಡಗಿದ್ದೇನೆ. ನನ್ನಲ್ಲಿ ಹೊಸ ಆಟಗಾರನನ್ನು ಕಂಡುಕೊಳ್ಳಲು ಅವರು ಪ್ರಯತ್ನಿಸಿದ್ದಾರೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಅವರು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಅವರು ತಿಳಿಸಿದರು.
31 ವರ್ಷ ವಯಸ್ಸಿನ ಜಿತೇಶ್ ಈ ಬಾರಿ 4 ಪಂದ್ಯಗಳಿಂದ ಉಪಯುಕ್ತ 85 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 185 ತಲುಪಿದೆ.
ಕಾರ್ತಿಕ್ ಈ ಹಿಂದೆ ಆರ್‌ಸಿಬಿ ವಿಕೆಟ್ ಕೀಪರ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.