ADVERTISEMENT

ಕ್ರಿಕೆಟ್‌: ಗಗನ್ ಸಾಯಿ ತ್ರಿಶತಕ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 21:47 IST
Last Updated 27 ಜನವರಿ 2023, 21:47 IST
ಗಗನ್ ಸಾಯಿ
ಗಗನ್ ಸಾಯಿ   

ಬೆಂಗಳೂರು: ಗಗನ್ ಸಾಯಿ ಕೆ. ಗಳಿಸಿದ ಅಮೋಘ ತ್ರಿಶತಕದ ಬಲದಿಂದ ಗಿರಿಧನ್ವ ಸ್ಕೂಲ್‌ ತಂಡವು ಬಿಟಿಆರ್‌ ಶೀಲ್ಡ್‌ 14 ವರ್ಷದೊಳಗಿನವರ ಒಂದನೇ ಗುಂಪು ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು.

ಇಲ್ಲಿ ನಡೆದ ಪಂದ್ಯದಲ್ಲಿ ಗಿರಿಧನ್ವ 534 ರನ್‌ಗಳಿಂದ ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್ ವಿರುದ್ಧ ಗೆದ್ದಿತು. ಮೊದಲು ಬ್ಯಾಟ್ ಮಾಡಿದ ಗಿರಿಧನ್ವ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 603 ರನ್ ಗಳಿಸಿತು. 150 ಎಸೆತಗಳನ್ನು ಎದುರಿಸಿದ ಗಗನ್‌ 59 ಬೌಂಡರಿ 10 ಸಿಕ್ಸರ್ ಸಿಡಿಸಿದರು. ಫ್ಲಾರೆನ್ಸ್ 16.4 ಓವರ್‌ಗಳಲ್ಲಿ 69 ರನ್‌ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್: ಗಿರಿಧನ್ವ ಸ್ಕೂಲ್‌: 50 ಓವರ್‌ಗಳಲ್ಲಿ 5ಕ್ಕೆ 603 (ಶಿವು ಎಂ. 36, ಗಗನ್ ಸಾಯಿ 344, ರೋಹಿತ್ ಸಾಯಿ ಕೇಟಿರೆಡ್ಡಿ ಔಟಾಗದೆ 95; ಅರ್ಜುನ್ ಬಾಲು 73ಕ್ಕೆ 2). ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್‌: 16.4 ಓವರ್‌ಗಳಲ್ಲಿ 69 (ಶಿವು ಎಂ. 15ಕ್ಕೆ 5, ಸಾತ್ವಿಕ್ ಮಹೇಂದ್ರ 21ಕ್ಕೆ 3). ಫಲಿತಾಂಶ: ಗಿರಿಧನ್ವ ಸ್ಕೂಲ್‌ ತಂಡಕ್ಕೆ 534 ರನ್‌ಗಳ ಜಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.