ADVERTISEMENT

ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಖಚಿತ: ವೇಳಾಪಟ್ಟಿ ಬದಲು

ರಾಯಿಟರ್ಸ್
Published 4 ಡಿಸೆಂಬರ್ 2021, 11:33 IST
Last Updated 4 ಡಿಸೆಂಬರ್ 2021, 11:33 IST
ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಆಟಗಾರ ರೋಹಿತ್ ಶರ್ಮಾ – ಪಿಟಿಐ ಚಿತ್ರ
ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಆಟಗಾರ ರೋಹಿತ್ ಶರ್ಮಾ – ಪಿಟಿಐ ಚಿತ್ರ   

ಕೇಪ್‌ ಟೌನ್: ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್‌ ಭೀತಿಯ ನಡುವೆಯೂ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವುದು ಖಚಿತವಾಗಿದೆ.

ಭಾರತ ತಂಡವು ದಕ್ಷಿಣ ಆಫ್ರಿಕಾಕ್ಕೆ ಒಂದು ವಾರ ತಡವಾಗಿ ಬರಲಿದೆ. ಮೂರು ಟೆಸ್ಟ್ ಹಾಗೂ ಮೂರು ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಲಿದೆ. ಟ್ವೆಂಟಿ–20 ಪಂದ್ಯಗಳನ್ನು ಮುಂದೂಡಲಾಗಿದ್ದು, ಜನವರಿಯಲ್ಲಿ ವೇಳಾಪಟ್ಟಿ ಸಿದ್ಧಪಡಿಸಲಾಗುವುದು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ (ಸಿಎಸ್‌ಎ) ತಿಳಿಸಿದೆ.

ಭಾರತ–ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಡಿಸೆಂಬರ್ 17ರಿಂದ ಆರಂಭವಾಗಲಿದೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಆದರೆ, ಭಾರತ ತಂಡವು ಒಂದು ವಾರ ತಡವಾಗಿ ಆಗಮಿಸುವುದರಿಂದ ಜನವರಿಯಲ್ಲಿ ಪಂದ್ಯಗಳು ನಡೆಯಲಿವೆ ಎಂದು ಸಿಎಸ್‌ಎ ತಿಳಿಸಿದೆ.

ಮೂರು ಟೆಸ್ಟ್ ಪಂದ್ಯಗಳನ್ನು ಆಯೋಜಿಸುವ ಸ್ಥಳವನ್ನು ಮುಂದಿನ 48 ಗಂಟೆ ಒಳಗೆ ನಿರ್ಧರಿಸಲಾಗುವುದು ಎಂದು ಸಿಎಸ್‌ಎ ವಕ್ತಾರರು ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.