ADVERTISEMENT

ವೇತನ ಕಡಿತ ಕುರಿತು ಇಸಿಬಿ ಚರ್ಚಿಸಬಹುದು: ಜೋ ರೂಟ್

ಪಿಟಿಐ
Published 31 ಮಾರ್ಚ್ 2020, 20:00 IST
Last Updated 31 ಮಾರ್ಚ್ 2020, 20:00 IST
ಜೋ ರೂಟ್
ಜೋ ರೂಟ್   

ಲಂಡನ್: ಕೊರೊನಾ ವೈರಸ್‌ ಪಿಡುಗಿನಿಂದ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಬೋರ್ಡ್‌ ಆರ್ಥಿಕ ನಷ್ಟ ಅನುಭವಿಸುತ್ತಿದೆ. ಆದ್ದರಿಂದ ತಮ್ಮ ಮತ್ತು ತಮ್ಮ ತಂಡದ ಆಟಗಾರರ ವೇತನದ ಕಡಿತದ ವಿಷಯದ ಕುರಿತು ಮಂಡಳಿ ಮತ್ತು ಆಟಗಾರರ ಸಮಿತಿಯು ಚರ್ಚೆ ನಡೆಸಬಹುದು ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹೇಳಿದ್ದಾರೆ.

ಕಳೆದ ಕೆಲವು ವಾರಗಳಿಂದ ವಿಶ್ವದೆಲ್ಲೆಡೆ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮೇ 28ರವರೆಗೆ ಯಾವುದೇ ದೊಡ್ಡ ಟೂರ್ನಿಗಳು ನಡೆಯುವುದಿಲ್ಲವೆನ್ನಲಾಗುತ್ತಿದೆ.

‘ಮುಂದಿನ ಕೆಲವು ವಾರಗಳಲ್ಲಿ ಈ ಕುರಿತು ಚರ್ಚೆ ನಡೆಯುವುದು ಖಚಿತ. ಅಲ್ಲಿಯವರೆಗೂ ವೇತನ ಕಡಿತದ ಕುರಿತು ನಾನು ಏನೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ.ಆದರೆ, ಆಟದಂಗಳಕ್ಕೆ ಮರಳುವವರೆಗೂ ನಾವೆಲ್ಲರೂ ಫಿಟ್ ಆಗಿರುವ ಸವಾಲು ಇದೆ. ಅದನ್ನು ನಿಭಾಯಿಸಲು ಬದ್ಧರಾಗಿದ್ದೇವೆ’ ಎಂದು ರೂಟ್ ಐಸಿಸಿ ವೆಬ್‌ಸೈಟ್‌ಗೆ ಹೇಳಿಕೆ ನೀಡಿದ್ದಾರೆ.

ADVERTISEMENT

ಕಳೆದ ತಿಂಗಳು ಇಂಗ್ಲೆಂಡ್ ಶ್ರೀಲಂಕಾ ಪ್ರವಾಸವನ್ನು ರದ್ದುಗೊಳಿಸಿತ್ತು. ಜೂನ್ ಮತ್ತು ಆಗಸ್ಟ್‌ನಲ್ಲಿ ತಮ್ಮ ತವರಿನಲ್ಲಿ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧ ಸೀಮಿತ ಓವರ್‌ಗಳ ಸರಣಿ ಆಡಬೇಕಿದೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯೂ ನಿಗದಿಯಾಗಿದೆ.ಆದರೆ ,ಈ ಸರಣಿಗಳು ಮುಂದೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.