ADVERTISEMENT

ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲು ಕರೆ ಬಂದಿತ್ತು: ಎಬಿ ಡಿವಿಲಿಯರ್ಸ್

ಪಿಟಿಐ
Published 29 ಏಪ್ರಿಲ್ 2020, 19:30 IST
Last Updated 29 ಏಪ್ರಿಲ್ 2020, 19:30 IST
ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್   

ಮುಂಬೈ: ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ತಮ್ಮ ನಿವೃತ್ತಿಯ ನಂತರವೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯು ರಾಷ್ಟ್ರೀಯ ತಂಡದ ನಾಯಕತ್ವ ವಹಿಸಲು ಆಹ್ವಾನ ನೀಡಿತ್ತು ಎಂದು ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ ಹೇಳಿದ್ದಾರೆ.

2018ರ ಮೇ ತಿಂಗಳಲ್ಲಿ ಎಬಿಡಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅದರ ನಂತರ ದಕ್ಷಿಣ ಆಫ್ರಿಕಾ ತಂಡದ ಪ್ರದರ್ಶನವು ಕುಸಿದಿತ್ತು.

ಈ ಕುರಿತು ಕ್ರಿಕೆಟ್‌ ವೈಬ್‌ಸೈಟ್‌ನ ಸ್ಪೋರ್ಟ್ಸ್‌ ಟಾಕ್‌ನಲ್ಲಿ ಮಾತನಾಡಿರುವ ಅವರು, ‘ನನಗೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಬೇಕು ಎನಿಸುತ್ತದೆ. ಆದರೆ, ಎಲ್ಲಕ್ಕಿಂಗ ಮುಖ್ಯವಾಗಿ ನಾನು ಉತ್ತಮ ಫಾರ್ಮ್‌ನಲ್ಲಿರಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ಸಾಮರ್ಥ್ಯ ನನಗಿದೆ ಎಂಬ ಬಲವಾದ ವಿಶ್ವಾಸ ಮನದಲ್ಲಿ ಮೂಡಬೇಕು. ಯುವ ಆಟಗಾರರಿಗಿಂತ ಸಮರ್ಥವೆಂದಾಗಬೇಕು. ಆಗ ಮಾತ್ರ ನಾನು ದೇಶಧ ತಂಡದಲ್ಲಿ ಆಡಲು ಅರ್ಹನಾಗಿರುತ್ತೇನೆ’ ಎಂದಿದ್ದಾರೆ.

ADVERTISEMENT

‘ಫ್ರ್ಯಾಂಚೈಸ್‌ ಕ್ರಿಕೆಟ್‌ನಲ್ಲಿ ಆಡುತ್ತಿದ್ದೇನೆ. ಈಗ ಕೊರೊನಾ ವೈರಸ್‌ನಿಂದಾಗಿ ಎಲ್ಲ ಚಟುವಟಿಕೆಗಳು ಸ್ಥಗಿತವಾಗಿವೆ. ಒಂದೊಮ್ಮೆ ಪರಿಸ್ಥಿತಿ ಸುಧಾರಣೆಗೊಂಡ ನಂತರ ಕ್ರಿಕೆಟ್ ವೇಳಾಪಟ್ಟಿಯೂ ಬದಲಾಗುತ್ತದೆ. ಈ ಕುರಿತು ಈಗಲೇ ಮಾತನಾಡುವುದು ಬೇಡ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.