ಮಾಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಡೇವಿಡ್ ವಾರ್ನರ್ ಮತ್ತು ವೀಕ್ಷಕ ವಿವರಣೆಕಾರ ಮೈಕಲ್ ಸ್ಲೇಟರ್ ನಡುವೆ ಮಾಲ್ಡಿವ್ಸ್ ಬಾರ್‌ನಲ್ಲಿ ಕುಡಿದ ಮತ್ತಿನಲ್ಲಿ ಶನಿವಾರ ತಡರಾತ್ರಿ ಜಟಾಪಟಿ ನಡೆದಿರುವುದಾಗಿ ವರದಿಯಾಗಿದೆ. ಆದರೆ ಈ ವರದಿಗಳನ್ನು ವಾರ್ನರ್ ಹಾಗೂ ಸ್ಲೇಟರ್ ಅವರು ಅಲ್ಲಗಳೆದಿದ್ದಾರೆ.
ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಬೇಕಿದ್ದ ಆಟಗಾರರು ಸ್ವಲ್ಪ ದಿನಗಳ ಕಾಲ ಮಾಲ್ಡಿವ್ಸ್‌ನಲ್ಲಿ ಕ್ವಾರಂಟೈನ್ ವಾಸದಲ್ಲಿದ್ದಾರೆ.
ಮಾಲ್ಡಿವ್ಸ್‌ನ ರೆಸಾರ್ಟ್‌ನಲ್ಲಿರುವ ವಾರ್ನರ್ ಹಾಗೂ ಸ್ಲೇಟರ್ ನಡುವೆ ವಾಗ್ವಾದ ನಡೆದಿದೆ ಎಂದು ‘ಡೈಲಿ ಟೆಲಿಗ್ರಾಫ್’ ವರದಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.