ನವದೆಹಲಿ: ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ಟೆನಿಸ್ ಪಂದ್ಯಕ್ಕೆ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಭಾರತದ ಶಶಿಕುಮಾರ್ ಮುಕುಂದ್ ಅವರು ಗಾಯದ ಸಮಸ್ಯೆಯಿಂದಾಗಿ ವಾಪಸ್ ಆಗಿದ್ದಾರೆ.
ಪಂದ್ಯವು ಇದೇ 29–30ರಂದುಕಜಕಿಸ್ತಾನದಲ್ಲಿ ನೂರ್–ಸುಲ್ತಾನ್‌ನಲ್ಲಿ ನಡೆಯಬೇಕಿತ್ತು. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಸುರಕ್ಷತೆ ಹಾಗೂ ಭದ್ರತೆಯ ಕಾರಣದಿಂದಾಗಿ ಕಜಕಿಸ್ತಾನಕ್ಕೆ ಸ್ಥಳಾಂತರಿಸಲಾಗಿತ್ತು.
‘ಈ ಹಿಂದೆ ಪೋರ್ಚುಗಲ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಆಡುವಾಗಲೇ ಅವರ ಪಾದಕ್ಕೆ ಗಾಯವಾಗಿತ್ತು. ಹೀಗಾಗಿ ಅವರು ಪಾಕಿಸ್ತಾನ ಎದುರಿನ ಪಂದ್ಯದಿಂದ ಹಿಂದೆ ಸರಿದಿದ್ದಾರೆ’ ಎಂದು ಡೇವಿಸ್ ಕಪ್ ತಂಡದ ತರಬೇತುದಾರ ಜೀಶನ್ ಅಲಿ ತಿಳಿಸಿದ್ದಾರೆ. ಮುಕುಂದ್ ಹಾಗೂಪುರವ ರಾಜಾ ಜೋಡಿ ಪೋರ್ಚುಗಲ್‌ನಲ್ಲಿ ಡಬಲ್ಸ್ ವಿಭಾಗದಲ್ಲಿ ಕಣಕ್ಕಿಳಿದಿದ್ದಾಗ ಗಾಯವಾಗಿತ್ತು.
ಮುಕುಂದ್ ಬದಲು ಎನ್. ಶ್ರೀರಾಮ್ ಬಾಲಾಜಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆಯಾದರೂ, ಅವರು ಕಜಕಿಸ್ತಾನಕ್ಕೆ ತೆರಳಲು ವೀಸಾ ಸಿಗುವುದು ಕಷ್ಟ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.