ಲೂಸನ್: ಜಗತ್ತಿನ ಅತಿ ದೊಡ್ಡ ಕ್ರೀಡಾ ಮೇಳವಾದ ಒಲಿಂಪಿಕ್ ಕ್ರೀಡೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಕಟು ನಿರ್ಧಾರ ತೆಗೆದುಕೊಳ್ಳಲು ಇದು ಸಕಾಲವಲ್ಲ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮಂಗಳವಾರ ತಿಳಿಸಿದೆ.
ಕೊರೊನಾ ಪಿಡುಗಿನ ನಡುವೆಯೂ, ಐಒಸಿ ಟೋಕಿಯೊ ಒಲಿಂಪಿಕ್ಸ್ ಮುಂದೂಡುವ ನಿರ್ಧಾರ ಕೈಗೊಂಡಿಲ್ಲ.
‘ಟೋಕಿಯೊ ಒಲಿಂಪಿಕ್ಸ್ 2020 ಕ್ರೀಡೆಗಳನ್ನು ನಡೆಸುವುದಕ್ಕೆ ಐಒಸಿ ಪೂರ್ಣ ಬದ್ಧತೆ ಹೊಂದಿದೆ. ಕ್ರೀಡೆ ಆರಂಭವಾಗಲು ನಾಲ್ಕು ತಿಂಗಳಿಗೂ ಹೆಚ್ಚು ಅವಧಿ ಉಳಿದಿದೆ. ಈ ಹಂತದಲ್ಲಿ ಕಠಿಣ ನಿರ್ಧಾರಕ್ಕೆ ಬರುವಂಥ ತುರ್ತು ಇಲ್ಲ. ಈ ಹಂತದಲ್ಲಿ ಯಾವುದೇ ಉಹಾಪೋಹ ತಿರುಗುಬಾಣವಾಗಬಹುದು’ ಎಂದು ಐಒಸಿ, ಕಾರ್ಯಕಾರಿ ಸಮಿತಿಯ ನಂತರ ಹೇಳಿಕೆಯಲ್ಲಿ ತಿಳಿಸಿದೆ.
ಟೋಕಿಯೊ ಒಲಿಂಪಿಕ್ಸ್ ಬರುವ ಜುಲೈ 24 ರಿಂದ ಆಗಸ್ಟ್ 9ರವರೆಗೆ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.