
ದುಬೈ: ಪ್ರಮುಖ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಮಂಗಳವಾರ ಪ್ರಕಟವಾದ ಐಸಿಸಿ ಮಹಿಳಾ ಟಿ20 ರ್‍ಯಾಂಕಿಂಗ್‌ನಲ್ಲಿ ಬೌಲರ್‌ಗಳ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದರು.
28 ವರ್ಷ ವಯಸ್ಸಿನ ದೀಪ್ತಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 20 ರನ್ನಿಗೆ 1 ವಿಕೆಟ್ ಪಡೆದಿದ್ದರು. ಭಾರತದ ಆಫ್‌ಸ್ಪಿನ್ನರ್ ಆ ಮೂಲಕ ಒಟ್ಟು 737 ಅಂಕ ಗಳಿಸಿ ಆಸ್ಟ್ರೇಲಿಯಾದ ವೇಗಿ ಅನ್ನಾಬೆಲ್ ಸದರ್‌ಲ್ಯಾಂಡ್ ಅವರನ್ನು ಹಿಂದೆಹಾಕಿದರು.
ಮಧ್ಯಮ ವೇಗಿ ಅರುಂಧತಿ ರೆಡ್ಡಿ ಐದು ಸ್ಥಾನ ಬಡ್ತಿ ಪಡೆದು 36ನೇ ಸ್ಥಾನಕ್ಕೇರಿದರೆ, ಸ್ಪಿನ್ನರ್ ಶ್ರೀ ಚರಣಿ 19 ಸ್ಥಾನಗಳಷ್ಟು ಮೇಲೇರಿ 69ನೇ ಸ್ಥಾನದಲ್ಲಿದ್ದಾರೆ.
ಮೊದಲ ಪಂದ್ಯದಲ್ಲಿ ಅಜೇಯ 69 ರನ್ ಗಳಿಸಿ ಪಂದ್ಯದ ಆಟಗಾರ್ತಿಯಾದ ಜೆಮಿಮಾ ರಾಡ್ರಿಗಸ್ ಅವರು ಬ್ಯಾಟರ್‌ಗಳ ವಿಭಾಗದಲ್ಲಿ ಐದು ಸ್ಥಾನ ಬಡ್ತಿ ಪಡೆದು ಒಂಬತ್ತನೆ ಸ್ಥಾನಕ್ಕೇರಿದ್ದಾರೆ. ತಂಡದ ಉಪನಾಯಕಿ ಸ್ಮೃತಿ ಮಂದಾನ ಮೂರನೇ ಸ್ಥಾನದಲ್ಲಿದ್ದು, ಭಾರತದ ಆಟಗಾರ್ತಿಯರಲ್ಲಿ ಮುಂಚೂಣಿಯಲ್ಲಿದ್ದಾರೆ. ಶಫಾಲಿ ವರ್ಮಾ ಒಂದು ಸ್ಥಾನ ಕೆಳಗಿಳಿದು 10ನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.