ADVERTISEMENT

ವಿಶ್ವಕಪ್ ಗೆಲುವು: ಹುಟ್ಟೂರಿನಲ್ಲಿ 10KM ರೋಡ್ ಶೋ ಮೂಲಕ ದೀಪ್ತಿ ಶರ್ಮಾಗೆ ಸ್ವಾಗತ

ಪಿಟಿಐ
Published 13 ನವೆಂಬರ್ 2025, 11:01 IST
Last Updated 13 ನವೆಂಬರ್ 2025, 11:01 IST
<div class="paragraphs"><p>ದೀಪ್ತಿ ಶರ್ಮಾ</p></div>

ದೀಪ್ತಿ ಶರ್ಮಾ

   

ಆಗ್ರಾ: ಮಹಿಳಾ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಟ್ರೋಫಿ ಗೆಲ್ಲಲು ನೆರವಾದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರಿಗೆ ಹುಟ್ಟೂರು ಆಗ್ರಾದಲ್ಲಿ 10 ಕಿ.ಮೀ ರೋಡ್ ಶೋ ಮೂಲಕ ಅದ್ಧೂರಿ ಸ್ವಾಗತ ನೀಡಲಾಗಿದೆ. 

ದೀಪ್ತಿ ಅವರಿಗೆ ಅಭಿನಂದಿಸಲು ಜಿಲ್ಲಾ ಕ್ರಿಕೆಟ್‌ ಅಸೋಸಿಯೇಷನ್‌ ರೋಡ್‌ ಶೋ ಆಯೋಜಿಸಿತ್ತು. ಆಗ್ರಾದ ಸಾವಿರಾರು ಜನರು ಬೀದಿ ಬದಿಗಳಲ್ಲಿ ಸಾಲಾಗಿ ನಿಂತು ದೀಪ್ತಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.

ADVERTISEMENT

ಶಾಲಾ ಮಕ್ಕಳು, ಕ್ರಿಕೆಟ್ ಆಸಕ್ತರು, ವಿವಿಧ ಸಾಮಾಜಿಕ ಮತ್ತು ಕ್ರೀಡಾ ಸಂಸ್ಥೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾರತದ ಧ್ವಜ ಹಾರಿಸುತ್ತಾ, ದೀಪ್ತಿ ಅವರ ಮೇಲೆ ಹೂಮಳೆ ಗೈದರು.

ರೋಡ್‌ ಶೋನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲು ಮತ್ತು ವಾಹನ ದಟ್ಟಣೆ ನಿರ್ವಹಿಸಲು 150ಕ್ಕೂ ಹೆಚ್ಚು ಪೊಲೀಸರು, ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದರು.

ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಎದುರಿನ ಪಂದ್ಯದಲ್ಲಿ 121 ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಅರ್ಧಶತಕ ಗಳಿಸಿ ಆಸರೆಯಾಗಿದ್ದರು. ಅದರಿಂದಾಗಿ ತಂಡವು 269 ರನ್ ಗಳಿಸಿತು. ಇಂಗ್ಲೆಂಡ್ ವಿರುದ್ಧವೂ ನಾಲ್ಕು ವಿಕೆಟ್ ಪಡೆದು, ಅರ್ಧಶತಕ ಗಳಿಸಿದ್ದರು. ಫೈನಲ್‌ನಲ್ಲಿ ಅವರ ಅರ್ಧಶತಕ ಮತ್ತು ಐದು ವಿಕೆಟ್ ಗೊಂಚಲು ಅವಿಸ್ಮರಣೀಯವಾಗಿದೆ. ಅದರಲ್ಲೂ ಶತಕ ಗಳಿಸಿದ್ದ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಟ್ ಅವರ ವಿಕೆಟ್ ಗಳಿಸಿದ್ದ ದೀಪ್ತಿ ಪಂದ್ಯಕ್ಕೆ ತಿರುವು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.