ADVERTISEMENT

ಐಪಿಎಲ್‌ 2019: ‘ಡೆಲ್ಲಿ ಕ್ಯಾಪಿಟಲ್ಸ್‌’ ಆಗಿ ಬದಲಾಯ್ತು ಡೆಲ್ಲಿ ಡೇರ್‌ಡೆವಿಲ್ಸ್‌

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 19:37 IST
Last Updated 4 ಡಿಸೆಂಬರ್ 2018, 19:37 IST
   

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ ಡೆಲ್ಲಿ ಡೇರ್‌ಡೆವಿಲ್ಸ್ ತಂಡವು ’ಡೆಲ್ಲಿ ಕ್ಯಾಪಿಟಲ್ಸ್‌’ ಆಗಿ ಹೆಸರು ಬದಲಿಸಿಕೊಂಡಿರುವುದಾಗಿ ಮಂಗಳವಾರ ಪ್ರಕಟಿಸಿದೆ.

ಜಿಎಂಆರ್‌ ಗ್ರೂಪ್‌ ಮತ್ತು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ ಮಾಲೀಕತ್ವದ ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ ಶೇ 50ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಂಡ ನಂತರದಲ್ಲಿ ಹೆಸರು ಬದಲಾವಣೆ ಘೋಷಣೆಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನಾಯಕರಾಗಿ ಶ್ರೇಯಸ್ ಅಯ್ಯರ್ ಮುಂದುವರಿಯಲಿದ್ದು, ಮೊಹಮ್ಮದ್‌ ಶಮಿ, ಜೇಸನ್‌ ರಾಯ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ ಸೇರಿ ಇತರೆ ಆಟಗಾರರನ್ನು ತಂಡ ಉಳಿಸಿಕೊಂಡಿದೆ.

ಹಿಂದಿನ ಐಪಿಎಲ್‌ ಟೂರ್ನಿಯಲ್ಲಿ ಕಳಪೆ ಪ್ರದರ್ಶನದಿಂದ ಹಿಂದೆ ಉಳಿದಿರುವ ದೆಹಲಿ ಫ್ರಾಂಚೈಸಿ 2019ರಲ್ಲಿ ಉತ್ತಮ ಪ್ರಾರಂಭ ಪಡೆಯಲು ಸಜ್ಜಾಗಿದೆ. ಸನ್‌ರೈಸರ್ಸ್‌ ಹೈದರಾಬಾದ್‌ನಿಂದ ಶಿಖರ್‌ ಧವನ್‌ ತಂಡಕ್ಕೆ ಮರಳಿರುವುದು ವಿಶ್ವಾಸ ಹೆಚ್ಚಿಸಿದೆ. ಶ್ರೇಯಸ್‌ ಐಯ್ಯರ್‌, ರಿಷಬ್‌ ಪಂತ್‌ ಹಾಗೂ ಪೃಥ್ವಿ ಷಾ ರಂತಹ ಯುವ ಆಟಗಾರರನ್ನು ತಂಡ ಒಳಗೊಂಡಿದೆ.

ADVERTISEMENT

ರಿಕಿ ಪಾಂಟಿಂಗ್‌ ತಂಡದ ಮುಖ್ಯ ತರಬೇತುದಾರರಾಗಿ ಮುಂದುವರಿಯಲಿದ್ದು, ಮೊಹಮ್ಮದ್‌ ಕೈಫ್‌ ತಂಡದ ಸಹಾಯಕ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.