ADVERTISEMENT

ಮಹಿಳಾ ವಿಶ್ವಕಪ್‌ ವಿಜೇತ ಭಾರತ ತಂಡಕ್ಕೆ ವಜ್ರದ ಉಡುಗೊರೆ ಘೋಷಿಸಿದ ಸೂರತ್‌ ಉದ್ಯಮಿ

ಪಿಟಿಐ
Published 3 ನವೆಂಬರ್ 2025, 10:11 IST
Last Updated 3 ನವೆಂಬರ್ 2025, 10:11 IST
   

ಸೂರತ್‌: ಮಹಿಳಾ ವಿಶ್ವಕಪ್‌ ವಿಜೇತ ಭಾರತ ತಂಡದ ಆಟಗಾರ್ತಿಯರಿಗೆ ವಜ್ರದ ಆಭರಣ ಹಾಗೂ ಸೋಲರ್‌ ಪ್ಯಾನೆಲ್‌ ಅನ್ನು ಉಡುಗೊರೆ ನೀಡುವುದಾಗಿ ಉದ್ಯಮಿ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಗೋವಿಂದ ಧೋಲಾಕಿಯಾ ಅವರು ಘೋಷಿಸಿದ್ದಾರೆ.

ಭಾರತ ಮಹಿಳಾ ತಂಡವು ಭಾನುವಾರ ನವಿ ಮುಂಬೈನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 52 ರನ್‌ಗಳ ಗೆಲುವು ಸಾಧಿಸುವ ಮೂಲಕ ಚೊಚ್ಚಲ ವಿಶ್ವಕಪ್‌ ಮುಡಿಗೇರಿಸಿಕೊಂಡಿತು.

ಉಡುಗೊರೆ ನೀಡುವ ಕುರಿತು ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಅವರಿಗೆ ಶ್ರೀ ರಾಮಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ ಸ್ಥಾಪಕ ಹಾಗೂ ಮುಖ್ಯಸ್ಥರಾಗಿರುವ ಗೋವಿಂದ ಧೋಲಾಕಿಯಾ ಅವರು ಪತ್ರ ಬರೆದಿದ್ದಾರೆ.

ADVERTISEMENT

ವಿಶ್ವಕಪ್‌ ವಿಜೇತ ತಂಡದ ಭಾಗವಾಗಿರುವ ಆಟಗಾರ್ತಿಯರಿಗೆ ವಜ್ರದ ಆಭರಣ ಹಾಗೂ ಅವರ ಮನೆಗಳಿಗೆ ಸೋಲರ್‌ ಅಳವಡಿಸಲು ಬಯಸಿದ್ದು, ದೇಶಕ್ಕೆ ಬೆಳಕು ನೀಡಿದವರ ಬದುಕುಗಳು ಕೂಡ ಬೆಳಕಿನಿಂದ ಕೂಡಿರಲಿ ಎಂದು ಗೋವಿಂದ ಧೋಲಾಕಿಯಾ ತಿಳಿಸಿದ್ದಾರೆ.

ಭಾರತ ಮಹಿಳಾ ತಂಡವು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದೆ. ಅವರಿಗೆ ನಮ್ಮ ಸಂಸ್ಥೆಯ ವತಿಯಿಂದ ಈ ಉಡುಗೊರೆ ನೀಡಲು ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.