ಚಿತ್ರ ಕೃಪೆ: @RCBTweets
ಇಂದು ಡಿಸೆಂಬರ್ 6. ಈ ದಿನ ಭಾರತ ಕ್ರಿಕೆಟ್ ತಂಡದ ಪರ ಆಡಿದ ಹಾಗೂ ಆಡುತ್ತಿರುವ ಆರು ಆಟಗಾರರ ಜನ್ಮದಿನ. ಅವರಲ್ಲಿ ಮೂವರು ಟೀಂ ಇಂಡಿಯಾಗೆ ಟಿ20 ವಿಶ್ವಕಪ್ ಗೆದ್ದಕೊಟ್ಟವರಾದರೆ, ಉಳಿದವರೂ ಸಾಧ್ಯವಾದಷ್ಟು ಕೊಡುಗೆ ನೀಡಿ ಮಿಂಚಿದವರೇ.
ಐಪಿಎಲ್‌ನಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆ ಎಲ್ಲರಿಗೂ ಶುಭ ಕೋರಿದೆ.
2007 ಚುಟುಕು ವಿಶ್ವಕಪ್ ಗೆದ್ದಿದ್ದ ವೇಗದ ಬೌಲರ್ ಆರ್.ಪಿ. ಸಿಂಗ್, 2024ರ ಟಿ20 ವಿಶ್ವಕಪ್ ವಿಜೇತರಾದ ಜಸ್‌ಪ್ರೀತ್ ಬೂಮ್ರಾ, ಆಲ್‌ರೌಂಡರ್ ರವೀಂದ್ರ ಜಡೇಜ, ಏಕದಿನ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್, ಕನ್ನಡಿಗ ಕರುಣ್ ನಾಯರ್, ಆರ್‌ಸಿಪಿ ತಂಡದ ಸುಯಾಷ್ ಪ್ರಭುದೇಸಾಯಿ ಅವರೆಲ್ಲ ಹುಟ್ಟಿದ್ದು ಇದೇ ದಿನ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಇವೆಲ್ಲರ ಚಿತ್ರಗಳನ್ನೂ ಹಂಚಿಕೊಂಡಿರುವ ಪ್ರಾಂಚೈಸ್, ಎಲ್ಲರನ್ನೂ ವಿಶೇಷವಾಗಿ ಪರಿಚಯಿಸಿದೆ.
ಇಂದಿನ ವಿಶೇಷ; ನಮ್ಮ ಖುಷಿಗೆ ಆರು ಕಾರಣಗಳು.
1: ಬೌಲಿಂಗ್ ಶ್ರೇಷ್ಠತೆ
2: ಸ್ಟೈಲೇ ಇವರ ಹೆಗ್ಗುರು
3: ರಾಕ್‌ಸ್ಟಾರ್ ಎನರ್ಜಿ
4: ದಿಟ್ಟ, ನಿರ್ಭೀತ ಪ್ರತಿಭೆ
5: ತ್ರಿಶತಕದ ರಾಯಲ್ಟಿ
6’ ವಿಶ್ವಕಪ್ ಹೀರೊ ಎಂದು ಉಲ್ಲೇಖಿಸಿ, ಎಲ್ಲರಿಗೂ ಶುಭ ಕೋರಿದೆ.
ಅಂದಹಾಗೆ, ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಪ್, ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಆ್ಯಂಡ್ರೋ ಫ್ಲಿಂಡಾಫ್ ಅವರ ಜನ್ಮದಿನವೇ ಇಂದೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.