ADVERTISEMENT

ಇಂಗ್ಲೆಂಡ್ ಲಯನ್ಸ್‌ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ದಿನೇಶ್ ಕಾರ್ತಿಕ್

ಪಿಟಿಐ
Published 10 ಜನವರಿ 2024, 15:43 IST
Last Updated 10 ಜನವರಿ 2024, 15:43 IST
ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್    

ಲಂಡನ್: ಭಾರತದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ಇಂಗ್ಲೆಂಡ್ ಲಯನ್ಸ್‌ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸುವರು.

ಭಾರತ ತಂಡದ ವಿಕೆಟ್‌ಕೀಪರ್–ಬ್ಯಾಟರ್  ಆಗಿದ್ದ ದಿನೇಶ್ ಅವರು ಭಾರತದಲ್ಲಿ ಆಡಲಿರುವ ಇಂಗ್ಲೆಂಡ್ ಲಯನ್ಸ್ ತಂಡಕ್ಕೆ ಒಂಬತ್ತು ದಿನಗಳ ಕಾಲ ಸಲಹೆಗಾರರಾಗಿರುತ್ತಾರೆ.

ಅಹಮದಾಬಾದಿನಲ್ಲಿ ಇದೇ 12ರಂದು ತಂಡವು ಆತಿಥೇಯರ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಆಡಲಿದೆ. ಇದೇ ತಾಣದಲ್ಲಿ 17ರಿಂದ ಮೂರು ‘ಟೆಸ್ಟ್‌‘ ಗಳು ನಡೆಯಲಿವೆ.

ADVERTISEMENT

ಲಯನ್ಸ್ ತಂಡದಲ್ಲಿ  ಉದಯೋನ್ಮುಖ ಆಟಗಾರರು ಇದ್ದಾರೆ. ತಂಡದ ಮುಖ್ಯ ಕೋಚ್ ನೀಲ್ ಕಿಲೀನ್, ಸಹಾಯಕ ಕೋಚ್‌ ರಿಚರ್ಡ್ ಡಾಸನ್ ಮತ್ತು ಕಾರ್ಲ್ ಹಾಪ್‌ಕಿನ್ಸನ್ ಅವರೊಂದಿಗೆ ದಿನೇಶ್ ಕಾರ್ಯನಿರ್ವಹಿಸುವರು. ಸುಮಾರು ಎರಡು ವರ್ಷಗಳಿಂದ ದಿನೇಶ್ ಅವರು ಭಾರತ ತಂಡದಲ್ಲಿ ಸ್ಥಾನ ಗಳಿಸಿಲ್ಲ.

ಇಂಗ್ಲೆಂಡ್ ಮಾಜಿ ಆಟಗಾರ ಗ್ರೆಮ್ ಸ್ವಾನ್ ಅವರು ತಂಡಕ್ಕೆ ಮಾರ್ಗದರ್ಶಕರಾಗಿದ್ದಾರೆ.  ಜೋಷ್ ಬೊಹಾನನ್ ತಂಡದ ನಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.