ADVERTISEMENT

ಕ್ರಿಕೆಟ್ : ಜಸ್ವಂತ್, ಮೋಹಿತ್ ಶತಕದ ಅಬ್ಬರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 20:00 IST
Last Updated 8 ಮಾರ್ಚ್ 2020, 20:00 IST
ಜಸ್ವಂತ್ ಆಚಾರ್ಯ
ಜಸ್ವಂತ್ ಆಚಾರ್ಯ   

ಬೆಂಗಳೂರು: ಜಸ್ವಂತ್ ಆಚಾರ್ಯ (ಔಟಾಗದೇ 144) ಮತ್ತು ಬಿ.ಎ. ಮೋಹಿತ್ (117) ಅವರ ಶತಕದ ಬಲದಿಂದ ಕಸ್ಟಮ್ಸ್‌ ಮತ್ತು ಸೆಂಟ್ರಲ್ ಎಕ್ಸೈಸ್ ತಂಡವು ಇಲ್ಲಿ ನಡೆದ ಕೆಎಸ್‌ಸಿಎ ಗ್ರುಪ್ 2, ಒಂದನೇ ಡಿವಿಷನ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ನೈರುತ್ಯ ರೈಲ್ವೆ ವಿರುದ್ಧ ಜಯಿಸಿತು.

ಆರ್‌ಎಸ್‌ಐ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರೈಲ್ವೆ ತಂಡವು 49.5 ಓವರ್‌ಗಳಲ್ಲಿ 287 ರನ್‌ ಗಳಿಸಿತು. ಕಸ್ಟಮ್ಸ್ ತಂಡದ ಆದಿತ್ಯ ಸೋಮಣ್ಣ ಐದು ವಿಕೆಟ್‌ ಗಳಿಸಿ ಮಿಂಚಿದರು. ಗುರಿ ಬೆನ್ನತ್ತಿದ ಕಸ್ಟಮ್ಸ್‌ ತಂಡವು ಜಸ್ವಂತ್ ಮತ್ತು ಮೋಹಿತ್ ಅಬ್ಬರದ ಬ್ಯಾಟಿಂಗ್ ಬಲದಿಂದ 35.2 ಓವರ್‌ಗಳಲ್ಲಿ 1 ವಿಕೆಟ್‌ಗೆ 288 ರನ್‌ ಗಳಿಸಿ ಗೆದ್ದಿತು.

ಸಂಕ್ಷಿಪ್ತ ಸ್ಕೋರ್: ನೈರುತ್ಯ ರೈಲ್ವೆ, ಹುಬ್ಬಳ್ಳಿ: 49.5 ಓವರ್‌ಗಳಲ್ಲಿ 287 (ನಿತಿನ್ ಭಿಲ್ಲೆ 50, ಎನ್. ಖಿಲಾರೆ 65, ಶೇರ್‌ ಬಹಾದ್ದೂರ್ ಯಾದವ್ 40, ಸಾಗರ್ 48, ಆದಿತ್ಯ ಸೋಮಣ್ಣ 78ಕ್ಕೆ5), ಕಸ್ಟಮ್ಸ್‌ ಮತ್ತು ಸೆಂಟ್ರಲ್ ಎಕ್ಸೈಸ್: 35.2 ಓವರ್‌ಗಳಲ್ಲಿ 1 ವಿಕೆಟ್‌ಗೆ 288 (ಜಸ್ವಂತ್ ಆಚಾರ್ಯ ಔಟಾಗದೆ 144, ಬಿ.ಎ. ಮೋಹಿತ್ 117) ಫಲಿತಾಂಶ: ಕಸ್ಟಮ್ಸ್‌ ಮತ್ತು ಸೆಂಟ್ರಲ್‌ ಎಕ್ಸೈಜ್ ತಂಡಕ್ಕೆ 9 ವಿಕೆಟ್‌ಗಳ ಜಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.