ADVERTISEMENT

₹2.92 ಕೋಟಿಗೆ ಡಾನ್‌ ಬ್ರಾಡ್ಮನ್‌ ಕ್ಯಾಪ್‌ ಹರಾಜು

ಪಿಟಿಐ
Published 26 ಜನವರಿ 2026, 20:16 IST
Last Updated 26 ಜನವರಿ 2026, 20:16 IST
   

ಗೋಲ್ಡ್ ಕೋಸ್ಟ್: 1947-48ರಲ್ಲಿ ಭಾರತ ವಿರುದ್ಧದ ನಡೆದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ದಂತಕಥೆ ಡಾನ್ ಬ್ರಾಡ್ಮನ್ ಧರಿಸಿದ್ದ ಬ್ಯಾಗಿ ಗ್ರೀನ್ ಕ್ಯಾಪ್ ಅನ್ನು ಸೋಮವಾರ ಇಲ್ಲಿ ಹರಾಜು ಮಾಡಲಾಯಿತು.

ಬ್ರಾಡ್ಮನ್ ನಂತರ ಆ ಕ್ಯಾಪ್‌ ಅನ್ನು ಎದುರಾಳಿ ತಂಡದ ಆಟಗಾರ ಶ್ರೀರಂಗ ವಾಸುದೇವ್ ಸೊಹೋನಿಗೆ ಉಡುಗೊರೆಯಾಗಿ ನೀಡಿದ್ದರು. ಇಲ್ಲಿ ನಡೆದ ಹರಾಜಿನಲ್ಲಿ ಆ ಕ್ಯಾಪ್‌ ದಾಖಲೆಯ ₹2.92 ಕೋಟಿ ಮೌಲ್ಯಕ್ಕೆ ಮಾರಾಟವಾಯಿತು.

ಸೊಹೋನಿ ಕುಟುಂಬವು ಕಳೆದ 75 ವರ್ಷಗಳಿಂದ ಈ ಕ್ಯಾಪ್ ಅನ್ನು ಸಾರ್ವಜನಿಕವಾಗಿ ಪ್ರದರ್ಶಿಸದೆ ಸಂರಕ್ಷಿಸಿತ್ತು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.