ADVERTISEMENT

ದುಲೀಪ್ ಟ್ರೋಫಿ: ಅಕೀಬ್ ಬಿರುಗಾಳಿ, ದಾನೀಶ್ ದ್ವಿಶತಕ

ಉತ್ತರ ವಲಯಕ್ಕೆ ಭಾರಿ ಮುನ್ನಡೆ; ದಾನೀಶ್ ದ್ವಿಶತಕ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 15:36 IST
Last Updated 29 ಆಗಸ್ಟ್ 2025, 15:36 IST
ಕೇಂದ್ರ ವಲಯ ತಂಡದ ದಾನೀಶ್ ಮಾಳೆವರ್ ದ್ವಿಶತಕ ದಾಖಲಿಸಿದರು  –ಪಿಟಿಐ ಚಿತ್ರ
ಕೇಂದ್ರ ವಲಯ ತಂಡದ ದಾನೀಶ್ ಮಾಳೆವರ್ ದ್ವಿಶತಕ ದಾಖಲಿಸಿದರು  –ಪಿಟಿಐ ಚಿತ್ರ   

ಬೆಂಗಳೂರು: ಕಾಶ್ಮೀರ ಕಣಿವೆಯ ವೇಗಿ ಅಕೀಬ್ ನಬೀ ಧಾರ್ ಬಿರುಗಾಳಿ ದಾಳಿಯ ಮುಂದೆ ಪೂರ್ವ ವಲಯ ತಂಡವು ದೂಳೀಪಟವಾಯಿತು. ಉತ್ತರ ವಲಯ ತಂಡವು ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಭಾರಿ ಮುನ್ನಡೆ ಗಳಿಸಿತು. 

ನಗರದ ಹೊರವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ  ಎರಡನೇ ದಿನದಾಟದಲ್ಲಿ 175 ರನ್‌ಗಳ ದೊಡ್ಡ ಮುನ್ನಡೆಯನ್ನು ಉತ್ತರ ವಲಯ ತಂಡವು ಗಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಉತ್ತರ ವಲಯ ತಮಡವು 93.2 ಓವರ್‌ಗಳಲ್ಲಿ 405 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಶುಕ್ರವಾರ ಪೂರ್ವ ವಲಯ ತಂಡವು 56.1 ಓವರ್‌ಗಳಲ್ಲಿ 230 ರನ್‌ಗಳಿಗೆ ಕುಸಿಯಿತು. ಅಕೀಬ್ (28ಕ್ಕೆ5) ಅವರು ತಮ್ಮ ಬಳಗದ ಮುನ್ನಡೆಗೆ ಕಾರಣರಾದರು. ಪೂರ್ವ ತಂಡದ ವಿರಾಟ್ ಸಿಂಗ್ (69; 102ಎ, 4X7, 6X2) ಅರ್ಧಶತಕ ಹೊಡೆದರು. 

ಆದಿತ್ಯಗೆ ಮೂರು ವಿಕೆಟ್: ಕೇಂದ್ರ ವಲಯ ತಂಡದ ಆದಿತ್ಯ ಠಾಕರೆ (23ಕ್ಕೆ3) ಮತ್ತು ಹರ್ಷ ದುಬೆ (19ಕ್ಕೆ2) ಅವರ ಉತ್ತಮ ಬೌಲಿಂಗ್ ಮುಂದೆ ಈಶಾನ್ಯ ವಲಯ ತಂಡದ ಬ್ಯಾಟರ್‌ಗಳು ತಡಬಡಾಯಿಸಿದರು. 

ADVERTISEMENT

ದಾನೀಶ್ ಮಾಳೆವರ್ (ಗಾಯಗೊಂಡು ನಿವೃತ್ತಿ 203 ) ದ್ವಿಶತಕ ಮತ್ತು ಯಶ್ ರಾಥೋಡ್ (ಔಟಾಗದೇ 87) ಅವರ ಉತ್ತಮ ಬ್ಯಾಟಿಂಗ್ ಮಾಡಿದರು. ಅದರಿಂದಾಗಿ ತಂಡವು 102 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 532 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ದಿನದಾಟದ ಕೊನೆಗೆ ಈಶಾನ್ಯ ವಲಯವು 65 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 168 ರನ್ ಗಳಿಸಿತು. 

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಉತ್ತರ ವಲಯ: 93.2 ಓವರ್‌ಗಳಲ್ಲಿ 405(ಕನ್ಹಯಾ ವಾಧ್ವಾನ್  76, ಮಯಂಕ್ ದಾಗರ್ 28, ಆಕಿಬ್ ನಬಿ 44, ಅರ್ಷದೀಪ್ ಸಿಂಗ್ ಔಟಾಗದೇ 12, ಮನೀಷಿ 111ಕ್ಕೆ6) ಪೂರ್ವ ವಲಯ: 56.1 ಓವರ್‌ಗಳಲ್ಲಿ 230 (ಉತ್ಕರ್ಷ್ ಸಿಂಗ್ 38, ರಿಯಾನ್ ಪರಾಗ್ 39, ವಿರಾಟ್ ಸಿಂಗ್ 69, ಕುಮಾರ ಖುಷಾಗ್ರ 29, ಅಕೀಬ್ ನಬಿ ಧಾರ್ 28ಕ್ಕೆ5, ಹರ್ಷಿತ್ ರಾಣಾ 56ಕ್ಕೆ2) 

ಮೊದಲ ಇನಿಂಗ್ಸ್: ಕೇಂದ್ರ ವಲಯ: 102 ಓವರ್‌ಗಳಲ್ಲಿ 4ಕ್ಕೆ532 ಡಿಕ್ಲೇರ್ಡ್ (ದಾನೀಶ್ ಮಾಳೆವರ್ 203, ಯಶ್ ರಾಥೋಡ್ ಔಟಾಗದೇ 87, ಶುಭಂ ಶರ್ಮಾ 34, ಆಕಾಶ್ ಚೌಧರಿ 103ಕ್ಕೆ2) ಈಶಾನ್ಯ ವಲಯ: 65 ಓವರ್‌ಗಳಲ್ಲಿ 7ಕ್ಕೆ168 (ಕರ್ಣಜೀತ್ ಯಮನಮ್ 48, ಆಶಿಶ್ ಥಾಪಾ 35, ಅಂಕುರ್ ಮಲಿಕ್ ಬ್ಯಾಟಿಂಗ್ 31, ಆದಿತ್ಯ ಠಾಕರೆ 23ಕ್ಕೆ3, ಹರ್ಷ ದುಬೆ 19ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.