ADVERTISEMENT

ಐಪಿಎಲ್: ಅ.17ರಂದು ಹೊಸ ತಂಡಗಳಿಗೆ ಇ-ಬಿಡಿಂಗ್

ಪಿಟಿಐ
Published 14 ಸೆಪ್ಟೆಂಬರ್ 2021, 15:41 IST
Last Updated 14 ಸೆಪ್ಟೆಂಬರ್ 2021, 15:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸೇರ್ಪಡೆಯಾಗಲಿರುವ ಎರಡು ತಂಡಗಳನ್ನು ಅಕ್ಟೋಬರ್ 17ರಂದು ಇ ಬಿಡಿಂಗ್ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಜಿಸಿದೆ.

ಮಂಡಳಿಯು ಆಗಸ್ಟ್ 31ರಂದು ಐಪಿಎಲ್ ಫ್ರ್ಯಾಂಚೈಸಿಗಳನ್ನು ಖರೀದಿಸಲು ಬಿಡ್‌ಗಳನ್ನು ಆಹ್ವಾನಿಸಿದೆ. ಅಕ್ಟೋಬರ್‌ 5ರವರೆಗೂ ಬಿಡ್ ಸಲ್ಲಿಸಲು ಅವಕಾಶ ಇದೆ.

‘ಐಪಿಎಲ್‌ನಲ್ಲಿ ಆಡುವ ಎರಡು ಹೊಸ ಫ್ರ್ಯಾಂಚೈಸಿಗಳನ್ನು ಪಡೆಯಲು ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಅದಕ್ಕಾಗಿ ಐಪಿಎಲ್ ಆಡಳಿತ ಸಮಿತಿಯು ಆಹ್ವಾನವನ್ನೂ ಮಾಡಿದೆ. ಅ.5ರವರೆಗೆ ಬಿಡ್ ಸಲ್ಲಿಸಲು ಗಡುವು ನೀಡಿದೆ. 2022ರ ಋತುವಿನಲ್ಲಿ ಉಭಯ ತಂಡಗಳು ಆಡಲಿವೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಹೊಸ ಎರಡು ತಂಡಗಳಿಗೆ ಕ್ರಮವಾಗಿ ಅಹಮದಾಬಾದ್, ಲಖನೌ ಅಥವಾ ಪುಣೆ ತವರಿನ ಕ್ರೀಡಾಂಗಣಗಳನ್ನಾಗಿ ಮಾಡುವ ಸಾಧ್ಯತೆ ಇದೆ.

ಫ್ರಾಂಚೈಸಿಗಳನ್ನು ಪಡೆಯಲು ದೇಶದ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಸ್ಪರ್ಧೆಯಲ್ಲಿವೆ ಎನ್ನಲಾಗಿದೆ. ಅದರಲ್ಲಿ ಅದಾನಿ ಸಮೂಹ, ಆರ್‌ಪಿಜಿ ಸಂಜೀವ್ ಗೋಯೆಂಕಾ ಸಮೂಹ, ಟಾರೆಂಟ್ ಫಾರ್ಮಾ ಮತ್ತು ಪ್ರತಿಷ್ಠಿತ ಬ್ಯಾಂಕ್‌ ಕೂಡ ಈ ರೇಸ್‌ನಲ್ಲಿವೆ ಎಂದು ತಿಳಿದುಬಂದಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.