ADVERTISEMENT

ಬಿಸಿಸಿಐನಿಂದ ಎಮಿರೇಟ್ಸ್‌ಗೆ ಐಪಿಎಲ್ ಆಯೋಜನೆಗೆ ಅಧಿಕೃತ ಸೂಚನೆ

ಪಿಟಿಐ
Published 11 ಆಗಸ್ಟ್ 2020, 14:35 IST
Last Updated 11 ಆಗಸ್ಟ್ 2020, 14:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಭಾರತೀಯ ಕ್ರಿಕೆಟ್ ಮಂಡಳಿಯು ಸಲ್ಲಿಸಿದ ಪ್ರಸ್ತಾವವನ್ನು ಎಮಿರೇಟ್ಸ್‌ ಕ್ರಿಕೆಟ್ ಮಂಡಳಿಯು ಸ್ವೀಕರಿಸಿದೆ.

ಸೆ‍ಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ಟೂರ್ನಿ ನಡೆಯಲಿದೆ. ಸೋಮವಾರ ಭಾರತ ಸರ್ಕಾರವು ಅನುಮತಿ ನೀಡಿದ ನಂತರ ಐಪಿಎಲ್ ಆಡಳಿತ ಸಮಿತಿಯ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಅವರು ಇಸಿಬಿಗೆ ಸಿದ್ಧತೆ ಆರಂಭಿಸುವಂತೆ ಸೂಚನೆ ನೀಡಿದರು.

ಭಾರತದಲ್ಲಿ ಕೋವಿಡ್ –19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ.

ADVERTISEMENT

’ಪ್ರತಿಷ್ಠಿತ ಕ್ರಿಕೆಟ್ ಲೀಗ್ ಆಯೋಜನೆಗೆ ನಮ್ಮ ದೇಶವನ್ನು ಆಯ್ಕೆ ಮಾಡಿಕೊಂಡಿದ್ದು ಹೆಮ್ಮೆ ಎನಿಸುತ್ತಿದೆ. ಉತ್ತಮ ಆಯೋಜನೆಗೆ ಒತ್ತು ನೀಡುತ್ತೇವೆ‘ ಎಂದು ಇಸಿಬಿ ಮುಖ್ಯಸ್ಥ ಮತ್ತು ಅಲ್ಲಿಯ ಸರ್ಕಾರದ ಸಚಿವ ಸಂಪುಟದಲ್ಲಿಯೂ ಇರುವ ಶೇಖ್ ನಹಾಯನ್ ಮಬಾರಕ್ ಅಲ್ ನಹಾಯನ್ ಹೇಳಿದ್ದಾರೆ.

’ಈ ಸಂದರ್ಭದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸಂಕಷ್ಟ ಇದೆ. ಆದರೆ, ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡಲು ನಾವು ಬದ್ಧರಾಗಿದ್ದೇವೆ. ಇಂತಹ ಆಕರ್ಷಕವಾದ ಟೂರ್ನಿಯನ್ನು ಸಂಘಟಿಸುವುದು ನಮಗೂ ಪ್ರತಿಷ್ಠೆಯ ವಿಷಯವಾಗಿದೆ‘ ಎಂದು ಅವರು ಹೇಳಿದ್ದಾರೆ.

’ನಮ್ಮ ದೇಶದ ಆರೋಗ್ಯ ಸಚಿವಾಲಯ, ಗೃಹ ಸಚಿವಾಲ, ಬಿಸಿಸಿಐ ಮತ್ತು ಐಪಿಎಲ್ ಸಮಿತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಎಲ್ಲವೂ ಸುರಕ್ಷಿತ ಮತ್ತು ಸುಂದರವಾಗಿ ನಡೆಯಲು ವ್ಯವಸ್ಥೆ ಮಾಡುವುದು ನಮ್ಮ ಗುರಿ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.