ADVERTISEMENT

ಅಂಧ ಅಭಿಮಾನಿಗೆ ಸಹಿಯಿರುವ ಬ್ಯಾಟ್‌ ನೀಡಿದ ಯಶಸ್ವಿ ಜೈಸ್ವಾಲ್: ಹೃದಯಸ್ಪರ್ಶಿ ಘಟನೆ

ಪಿಟಿಐ
Published 6 ಜುಲೈ 2025, 13:26 IST
Last Updated 6 ಜುಲೈ 2025, 13:26 IST
<div class="paragraphs"><p>ಅಂಧ ಅಭಿಮಾನಿಗೆ ಸಹಿಯಿರುವ ಬ್ಯಾಟ್‌ ನೀಡಿದ ಯಶಸ್ವಿ ಜೈಸ್ವಾಲ್</p></div>

ಅಂಧ ಅಭಿಮಾನಿಗೆ ಸಹಿಯಿರುವ ಬ್ಯಾಟ್‌ ನೀಡಿದ ಯಶಸ್ವಿ ಜೈಸ್ವಾಲ್

   

ಬರ್ಮಿಂಗ್‌ಹ್ಯಾಮ್‌: ಎಜ್ಬಾಸ್ಟನ್‌ ಕ್ರೀಡಾಂಗಣ ಶನಿವಾರ ಸಂಜೆ ಹೃದಯಸ್ಪರ್ಶಿ ಕ್ಷಣಗಳಿಗೆ ಸಾಕ್ಷಿಯಾಯಿತು. ಭಾರತ ತಂಡದ ಯುವತಾರೆ ಯಶಸ್ವಿ ಜೈಸ್ವಾಲ್ ಅವರು ತಮ್ಮ ಅಭಿಮಾನಿ, ಅಂಧ ಬಾಲಕ ರವಿ ಅವರಿಗೆ ಹಸ್ತಾಕ್ಷರವಿರುವ ಬ್ಯಾಟ್‌ ಅನ್ನು ಕೊಡುಗೆಯಾಗಿ ನೀಡಿದರು.

ಜೈಸ್ವಾಲ್ ಅವರ ಕಟ್ಟಾ ಅಭಿಮಾನಿಯಾಗಿರುವ ರವಿ ಅವರು ಲೀಡ್ಸ್‌ ಟೆಸ್ಟ್‌ನಿಂದಲೇ ತಮ್ಮ ನೆಚ್ಚಿನ ಆಟಗಾರರನ್ನು ಭೇಟಿಯಾಗುವ ವಿಶ್ವಾಸದಲ್ಲಿದ್ದರು. ಆದರೆ ಎರಡನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಅವರ ಕನಸು ಸಾಕಾರಗೊಂಡಿತು.

ADVERTISEMENT

ಆಟದ ಬಗ್ಗೆ ರವಿ ಅವರ ಪ್ರೇಮ ಕಂಡು ಮಿಡಿದ ಜೈಸ್ವಾಲ್‌ ‘ವಿದ್‌ ಬೆಸ್ಟ್‌ ವಿಷಸ್‌ ಟು ರವಿ ವಿದ್‌ ಕೇರ್‌ ಆ್ಯಂಡ್‌ ಲವ್‌’ ಎಂದು ಹಸ್ತಾಕ್ಷರ ಸಹಿತ ಬ್ಯಾಟ್‌ ಕೊಡುಗೆಯಾಗಿ ನೀಡಿದರು.

‘ಹಲೋ ರವಿ, ನೀನು ಹೇಗಿದ್ದಿ. ನಾನು ಯಶಸ್ವಿ. ನಿನ್ನನ್ನು ಭೇಟಿಯಾಗಲು ಸಂತಸವಾಗುತ್ತಿದೆ. ನೀನು ದೊಡ್ಡ ಕ್ರಿಕೆಟ್‌ ಅಭಿಮಾನಿಯೆಂದು ತಿಳಿದುಭೇಟಿಗೆ ಕಾತರನಾಗಿದ್ದೆ. ನಿನ್ನನ್ನು ಭೇಟಿಯಾಗಲು ಯಾಕೆ ಇಷ್ಟೊಂದು ನರ್ವಸ್‌ ಆಗುತ್ತಿದೆ ಗೊತ್ತಾಗುತ್ತಿಲ್ಲ’ ಎಂದು ಜೈಸ್ವಾಲ್ ಅವರು ರವಿಗೆ ಹೇಳಿರುವ ವಿಡಿಯೊವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

‘ನನ್ನ ಕಡೆಯಿಂದ ನಿನಗೊಂದು ಉಡುಗೋರೆಯಿದೆ.... ನನ್ನ ಬ್ಯಾಟ್‌. ನನ್ನ ನೆನಪಿನಲ್ಲಿ ಇದನ್ನು ತೆಗೆದಿಡು. ನಿನ್ನನ್ನು ಭೇಟಿಯಾಗಿರುವುದು ಸಂತಸವೆನಿಸುತ್ತಿದೆ’ ಎಂದು ಜೈಸ್ವಾಲ್ ಹೇಳಿದ್ದಾರೆ.

ರವಿ ಸಹ ‘ನನಗೂ ಅಷ್ಟೇ. ಬಹಳ ಸಂತಸವಾಗಿದೆ. ತುಂಬಾ ಧನ್ಯವಾದಗಳು. ನೀವು ಭಾರತದ ಕ್ರಿಕೆಟ್‌ನ ಭವಿಷ್ಯ. ನನಗೆ ಕ್ರಿಕೆಟ್‌ ಅಚ್ಚುಮೆಚ್ಚು. ನೀವು ಬ್ಯಾಟಿಂಗ್ ಮಾಡುವುದು ಕಂಡರೆ ಇಷ್ಟ. ನಿಮ್ಮ ಶತಕಗಳೂ ನನಗೆ ಇಷ್ಟ. ಅವೆಲ್ಲವೂ ಅಮೋಘವಾದುವು’ ಎಂದಿದ್ದಾರೆ.

ಅಂಧನಾಗಿದ್ದರೂ, ಕ್ರಿಕೆಟ್‌ ಮತ್ತು ಭಾರತದ ಆಟಗಾರರ ಬಗ್ಗೆ ರವಿ ಅವರ ಆಳವಾದ ಜ್ಞಾನ ಜೈಸ್ವಾಲ್‌ ಅವರನ್ನು ಪ್ರಭಾವಿತಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.