ಬೆನ್ ಸ್ಟೋಕ್ಸ್
(ಚಿತ್ರ ಕೃಪೆ: ECB)
ಮ್ಯಾಂಚೆಸ್ಟರ್: ಪ್ರವಾಸಿ ಭಾರತ ವಿರುದ್ಧ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್ ತಂಡದ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಲಾಗಿದೆ.
ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಗಾಯಾಳು ಶೋಯಬ್ ಬಷೀರ್ ಬದಲಿಗೆ ಲಿಯಾಮ್ ಡಾಸನ್‌ಗೆ ಅವಕಾಶ ನೀಡಲಾಗಿದೆ.
2017ರ ಜುಲೈನಲ್ಲಿ ಡಾಸನ್ ಅವರು ಇಂಗ್ಲೆಂಡ್ ತಂಡವನ್ನು ಕೊನೆಯದಾಗಿ ಪ್ರತಿನಿಧಿಸಿದ್ದರು. ಈಗ ಎಂಟು ವರ್ಷಗಳ ಬಳಿಕ ಹ್ಯಾಂಪ್‌ಶೈರ್ ಸ್ಪಿನ್ನರ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಜುಲೈ 23ರಿಂದ ಓಲ್ಡ್ ಟ್ರಾಫರ್ಡ್‌ನಲ್ಲಿ ಆರಂಭವಾಗಲಿದೆ.
ಲೀಡ್ಸ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಐದು ವಿಕೆಟ್‌ಗಳ ಅಂತರದ ಜಯ ಗಳಿಸಿತ್ತು. ಎಜ್‌ಬಾಸ್ಟನ್‌ನಲ್ಲಿ ತಿರುಗೇಟು ನೀಡಿದ ಭಾರತ 336 ರನ್ ಅಂತರದ ಭರ್ಜರಿ ಜಯ ಸಾಧಿಸಿತ್ತು.
ಆದರೆ ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ 22 ರನ್ ಅಂತರದ ಸೋಲಿಗೆ ಶರಣಾಗಿತ್ತು. ಆ ಮೂಲಕ ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಬಷೀರ್ ಗಾಯಕ್ಕೊಳಗಾಗಿದ್ದರು. ನೋವಿನ ನಡುವೆಯೂ ಬೌಲಿಂಗ್ ಮಾಡಿದ್ದ ಬಷೀರ್, ಕೊನೆಯ ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಮಹತ್ವದ ಗೆಲುವು ದೊರಕಿಸಿಕೊಡುವಲ್ಲಿ ನೆರವಾಗಿದ್ದರು.
ಇಂಗ್ಲೆಂಡ್ ಆಡುವ ಹನ್ನೊಂದರ ಬಳಗ ಇಂತಿದೆ:
1. ಜಾಕ್ ಕ್ರಾಲಿ
2. ಬೆನ್ ಡಕೆಟ್
3. ಓಲಿ ಪೋಪ್
4. ಜೋ ರೂಟ್
5. ಹ್ಯಾರಿ ಬ್ರೂಕ್
6. ಬೆನ್ ಸೋಕ್ಸ್ (ನಾಯಕ)
7. ಜೇಮಿ ಸ್ಮಿತ್ (ವಿಕೆಟ್ ಕೀಪರ್)
8. ಲಿಯಾಮ್ ಡಾಸನ್
9. ಕ್ರಿಸ್ ವೋಕ್ಸ್
10. ಬ್ರೈಡನ್ ಕಾರ್ಸ್
11. ಜೋಫ್ರಾ ಆರ್ಚರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.