ADVERTISEMENT

ಕ್ರಿಕೆಟ್: ಜಂಪಾ ಸ್ಪಿನ್‌ಗೆ ತಡಬಡಾಯಿಸಿದ ಇಂಗ್ಲೆಂಡ್

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 16:38 IST
Last Updated 13 ಸೆಪ್ಟೆಂಬರ್ 2020, 16:38 IST
ಆಸ್ಟ್ರೇಲಿಯಾದ ಬೌಲರ್ ಆ್ಯಡಂ ಜಂಪಾ  –ರಾಯಿಟರ್ಸ್ ಚಿತ್ರ
ಆಸ್ಟ್ರೇಲಿಯಾದ ಬೌಲರ್ ಆ್ಯಡಂ ಜಂಪಾ  –ರಾಯಿಟರ್ಸ್ ಚಿತ್ರ   

ಮ್ಯಾಂಚೆಸ್ಟರ್ : ಆಸ್ಟ್ರೇಲಿಯಾದ ಆ್ಯಡಂ ಜಂಪಾ ಸ್ಪಿನ್ ಮೋಡಿಗೆ ಆತಿಥೇಯ ಇಂಗ್ಲೆಂಡ್‌ ಬ್ಯಾಟಿಂಗ್ ಪಡೆಯು ತಡವರಿಸಿತು.‌

ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಏಯಾನ್ ಮಾರ್ಗನ್ ಬಳಗವು 50 ಓವರ್‌ಗಳಲ್ಲಿ 9ಕ್ಕೆ 231 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು ಏಳು ಓವರ್‌ಗಳಲ್ಲಿ 29 ರನ್‌ಗಳಿಗೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಜಾನಿ ಬೆಸ್ಟೊ ಖಾತೆ ತೆರೆಯದೇ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್‌ ಒಪ್ಪಿಸಿದರು.

ADVERTISEMENT

ಜೇಸನ್ ರಾಯ್ (21ರನ್) ರನ್‌ಔಟ್ ಆದರು. ಈ ಹಂತದಲ್ಲಿ ರೂಟ್ (39; 73ಎಸೆತ) ಮತ್ತು ನಾಯಕ ಮಾರ್ಗನ್ (42; 52ಎ) ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಇವರಿಬ್ಬರಿಗೂ ಜಂಪಾ ಪೆವಿಲಿಯನ್ ಹಾದಿ ತೋರಿದರು. ಸ್ಯಾಮ್ ಬಿಲ್ಲಿಂಗ್ಸ್‌ ಅವರನ್ನೂ ಜಂಪಾ ಕ್ಲೀನ್‌ಬೌಲ್ಡ್ ಮಾಡಿದರು. ತುಸು ಹೋರಾಟ ತೋರಿದ ಕ್ರಿಸ್ ವೋಕ್ಸ್‌ (26 ರನ್), ಕೆಳಕ್ರಮಾಂಕದಲ್ಲಿ ಟಾಮ್ ಕರನ್ (37) ಮತ್ತು ಆದಿಲ್ ರಶೀದ್ (ಔಟಾಗದೆ 35) ಅವರು ಎರಡಂಕಿ ದಾಟಿದ್ದರಿಂದ ತಂಡವು ಇನ್ನೂರರ ಗಡಿ ದಾಟಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 50 ಓವರ್‌ಗಳಲ್ಲಿ 9ಕ್ಕೆ231 (ಜೇಸನ್ ರಾಯ್ 21, ಜೋ ರೂಟ್ 39, ಏಯಾನ್ ಮಾರ್ಗನ್ 42, ಕ್ರಿಸ್ ವೋಕ್ಸ್‌ 26, ಟಾಮ್ ಕರನ್ 37, ಆದಿಲ್ ರಶೀದ್ ಬ್ಯಾಟಿಂಗ್ 35, ಮಿಚೆಲ್ ಸ್ಟಾರ್ಕ್ 38ಕ್ಕೆ2, ಆ್ಯಡಂ ಜಂಪಾ 36ಕ್ಕೆ3) ಆಸ್ಟ್ರೇಲಿಯಾ ವಿರುದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.