ADVERTISEMENT

IND vs ENG: ಇಂಗ್ಲೆಂಡ್‌ಗೆ ಇನ್ನಿಂಗ್ಸ್ ಹಾಗೂ 76 ರನ್ ಅಂತರದ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 12:19 IST
Last Updated 28 ಆಗಸ್ಟ್ 2021, 12:19 IST
ಇಂಗ್ಲೆಂಡ್ ಆಟಗಾರರ ಸಂಭ್ರಮ
ಇಂಗ್ಲೆಂಡ್ ಆಟಗಾರರ ಸಂಭ್ರಮ   

ಲೀಡ್ಸ್: ಪ್ರವಾಸಿ ಭಾರತ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 76 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಅಂತರದ ಸಮಬಲ ದಾಖಲಿಸಿದೆ.

354 ರನ್ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ಮೂರನೇ ದಿನದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿ ತಿರುಗೇಟು ನೀಡುವ ಸೂಚನೆ ನೀಡಿತ್ತು.

ADVERTISEMENT

ಆದರೆ ನಾಲ್ಕನೇ ದಿನದಾಟದಲ್ಲಿ ಒಲಿ ರಾಬಿನ್ಸನ್ ದಾಳಿಗೆ ಕುಸಿದಿರುವ ಭಾರತ ತಂಡವು 99.3 ಓವರ್‌ಗಳಲ್ಲಿ 278 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ಹೀನಾಯ ಸೋಲಿಗೆ ಒಳಗಾಗಿದೆ.

ಚೇತೇಶ್ವರ್ ಪೂಜಾರ (91) ಕಳೆದ ದಿನದ ಅದೇ ಮೊತ್ತಕ್ಕೆ ಔಟಾದರು. ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿದರೂ (55) ಬೇಗನೇ ವಿಕೆಟ್ ಒಪ್ಪಿಸಿ ನಿರಾಸೆ ಅನುಭಿಸಿದರು. ಅಜಿಂಕ್ಯ ರಹಾನೆ (10), ರಿಷಭ್ ಪಂತ್ (1), ರವೀಂದ್ರ ಜಡೇಜ (30), ಮೊಹಮ್ಮದ್ ಶಮಿ (6), ಇಶಾಂತ್ ಶರ್ಮಾ (2), ಮೊಹಮ್ಮದ್ ಸಿರಾಜ್ (0) ಹಾಗೂ ಜಸ್‌ಪ್ರೀತ್ ಬೂಮ್ರಾ (1*) ರನ್ ಗಳಿಸಿದರು.

ಇಂಗ್ಲೆಂಡ್ ಪರ ಕೇವಲ 65 ರನ್ ತೆತ್ತು ಐದು ವಿಕೆಟ್ ಕಬಳಿಸಿದ ಒಲಿ ರಾಬಿನ್ಸನ್ ಮಿಂಚಿದರು. ಇವರಿಗೆ ತಕ್ಕ ಸಾಥ್ ನೀಡಿದ ಕ್ರೇಗ್ ಓವರ್ಟನ್ ಮೂರು ಮತ್ತು ಜೇಮ್ಸ್ ಆ್ಯಂಡರ್ಸನ್ ಹಾಗೂ ಮೊಯಿನ್ ಅಲಿ ತಲಾ ಒಂದು ವಿಕೆಟ್ ಹಂಚಿದರು.

ಸಂಕ್ಷಿಪ್ತ ಸ್ಕೋರ್ ಇಂತಿದೆ:
ಭಾರತ ಮೊದಲ ಇನ್ನಿಂಗ್ಸ್ 78ಕ್ಕೆ ಆಲೌಟ್,
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 432ಕ್ಕೆ ಆಲೌಟ್ (ಜೋ ರೂಟ್ 121)
ಭಾರತ ದ್ವಿತೀಯ ಇನ್ನಿಂಗ್ಸ್ 278ಕ್ಕೆ ಆಲೌಟ್ (ಒಲಿ ರಾಬಿನ್ಸನ್ 65ಕ್ಕೆ 5 ವಿಕೆಟ್)

ಇದುವರೆಗಿನ ಫಲಿತಾಂಶಗಳು:
ಮೊದಲ ಟೆಸ್ಟ್: ಡ್ರಾ
ದ್ವಿತೀಯ ಟೆಸ್ಟ್: ಭಾರತಕ್ಕೆ 151 ರನ್ ಅಂತರದ ಗೆಲುವು
ತೃತೀಯ ಟೆಸ್ಟ್: ಇಂಗ್ಲೆಂಡ್‌ಗೆ ಇನ್ನಿಂಗ್ಸ್ ಹಾಗೂ 76 ರನ್ ಅಂತರದ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.