ADVERTISEMENT

ಭಾರತ ವಿರುದ್ಧದ WTC ಫೈನಲ್‌ಗೆ ಇಂಗ್ಲೆಂಡ್‌ ಸರಣಿಯು ಉತ್ತಮ ತಯಾರಿ: ಟಿಮ್ ಸೌಥಿ

​ಪ್ರಜಾವಾಣಿ ವಾರ್ತೆ
Published 21 ಮೇ 2021, 14:33 IST
Last Updated 21 ಮೇ 2021, 14:33 IST
ನ್ಯೂಜಿಲೆಂಡ್‌ ವೇಗಿ ಟಿಮ್‌ ಸೌಥಿ
ನ್ಯೂಜಿಲೆಂಡ್‌ ವೇಗಿ ಟಿಮ್‌ ಸೌಥಿ   

ಸೌಥಾಂಪ್ಟನ್:‌ ಮುಂದಿನ ತಿಂಗಳು ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (ಡಬ್ಲ್ಯುಟಿಸಿ) ಫೈನಲ್‌ಗೆ ಉತ್ತಮ ತಯಾರಿಯಾಗಲಿದೆ ಎಂದು ನ್ಯೂಜಿಲೆಂಡ್‌ ತಂಡದ ಪ್ರಮುಖ ವೇಗಿ ಟಿಮ್‌ ಸೌಥಿ ಹೇಳಿದ್ದಾರೆ.

ವಿಶ್ವ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿರುವಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು ಡಬ್ಲ್ಯುಟಿಸಿ ಫೈನಲ್‌ಗೆ ಪ್ರವೇಶಿಸಿವೆ. ಫೈನಲ್‌ ಪಂದ್ಯವು ಜೂನ್‌18 ರಂದು ಸೌಥಾಂಪ್ಟನ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದಕ್ಕೂ ಮೊದಲು ನ್ಯೂಜಿಲೆಂಡ್‌ ತಂಡ ಆತಿಥೇಯ ಇಂಗ್ಲೆಂಡ್‌ ವಿರುದ್ಧಜೂನ್‌2-6 ಮತ್ತು ಜೂನ್‌ 10-14ರವರೆಗೆ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಸೆಣಸಲಿದೆ.

ಇಂಗ್ಲೆಂಡ್‌ ವಿರುದ್ಧದ ಪಂದ್ಯಗಳ ಬಗ್ಗೆ ಮಾತನಾಡಿರುವ ಸೌಥಿ, 'ನ್ಯೂಜಿಲೆಂಡ್‌ ಪರವಾಗಿ ಟೆಸ್ಟ್‌ ಪಂದ್ಯ ಆಡುವುದು ಅದ್ಭುತವಾದ ಅವಕಾಶ ಮತ್ತು ಅಮೂಲ್ಯವಾದ ಸಂಗತಿಯಾಗಿದೆ. ಹಾಗಾಗಿ, ಈ ಟೆಸ್‌ ಪಂದ್ಯಗಳನ್ನುಅಭ್ಯಾಸ ಪಂದ್ಯಗಳೆಂದು ಭಾವಿಸುವುದಿಲ್ಲʼ ಎಂದು ಹೇಳಿದ್ದಾರೆ.

ADVERTISEMENT

ʼಇದು ಇಂಗ್ಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿ. ಹಾಗಾಗಿ ನಮ್ಮ ಗಮನವು ಮೊದಲು ಮತ್ತು ಮುಖ್ಯವಾಗಿ ಇಂಗ್ಲೆಂಡ್‌ ವಿರುದ್ಧದ ಆ ಎರಡು ಪಂದ್ಯಗಳ ಮೇಲಿರುತ್ತದೆʼ ಎಂದಿದ್ದಾರೆ.

ʼಆ ಪಂದ್ಯಗಳು ನಮಗೆ ಫೈನಲ್‌ನತ್ತ ಮುನ್ನಡೆಯಲು ಉತ್ತಮ ಅವಕಾಶಗಳಾಗಿವೆ. ಇದು ಫೈನಲ್‌ಗೆ ಉತ್ತಮತಯಾರಿಯಾಗಿದೆ. ಆದರೆ, ಆ ಪಂದ್ಯಗಳ ಬಗ್ಗೆ ಹೇಳಬೇಕಾದರೆ, ಇದು ನಮ್ಮ ಪಾಲಿಗೆ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಗುಣಮಟ್ಟದ ಇಂಗ್ಲೆಂಡ್‌ ತಂಡದ ವಿರುದ್ಧ ಆಡಲು ಎದುರು ನೋಡುತ್ತಿದ್ದೇವೆʼ ಎಂದು ಹೇಳಿದ್ದಾರೆ.

ಮುಂದುವರಿದು, ಕಡಿಮೆ ಅವಧಿಯಲ್ಲಿ ಮೂರು ಟೆಸ್ಟ್‌ ಪಂದ್ಯಗಳನ್ನು ಆಡುವುದು ರೋಮಾಂಚನಕಾರಿಯಾಗಿರಲಿದೆ. ತಂಡಗಳಿಗೆ ಇಂತಹ ಅವಕಾಶ ಆಗಾಗ್ಗೆ ಸಿಗುವುದಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.