ADVERTISEMENT

ಶೇನ್ ವಾರ್ನ್ ಜೊತೆಗಿನ ಪ್ರತಿಯೊಂದು ಮಾತುಕತೆಯು ಕಲಿಕೆಯ ಅನುಭವ: ಕೊಹ್ಲಿ

ಐಎಎನ್ಎಸ್
Published 15 ಏಪ್ರಿಲ್ 2022, 13:59 IST
Last Updated 15 ಏಪ್ರಿಲ್ 2022, 13:59 IST
ಶೇನ್ ವಾರ್ನ್ (ಐಎಎನ್‌ಎಸ್ ಚಿತ್ರ)
ಶೇನ್ ವಾರ್ನ್ (ಐಎಎನ್‌ಎಸ್ ಚಿತ್ರ)   

ಮುಂಬೈ: ಆಸ್ಟ್ರೇಲಿಯಾದ ದಿವಂಗತ ಸ್ಪಿನ್ ದಂತಕಥೆ ಶೇನ್ ವಾರ್ನ್ ಅವರು ನನ್ನ ಬಾಲ್ಯದ ಹೀರೊ ಎಂದು ಹೇಳಿರುವ ವಿರಾಟ್ ಕೊಹ್ಲಿ, ದಿಗ್ಗಜ ಆಟಗಾರನೊಂದಿಗಿನ ಪ್ರತಿಯೊಂದು ಮಾತುಕತೆಯು ಕಲಿಕೆಯ ಅನುಭವವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಥಾಯ್ಲೆಂಡ್‌ನ ಹೋಟೆಲ್‌ನಲ್ಲಿ ಶೇನ್ ವಾರ್ನ್ ನಿಧನ ಹೊಂದಿದ್ದರು. ಅವರಿಗೆ ಹೃದಯಾಘಾತವಾಗಿತ್ತು ಎಂದು ಶಂಕಿಸಲಾಗಿದೆ.

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ತಮ್ಮ ಕ್ರಿಕೆಟ್ ಜೀವನದಲ್ಲೂ ಬೀರಿರುವ ಪ್ರಭಾವವನ್ನು ವಿರಾಟ್ ಕೊಹ್ಲಿ ವಿವರಿಸಿದ್ದಾರೆ. 'ಅನೇಕ ಕ್ರಿಕೆಟಿಗರಂತೆ ನನಗೂ ಶೇನ್ ವಾರ್ನ್ ಬಾಲ್ಯದ ಹೀರೊ ಆಗಿದ್ದರು. ಅವರು ಅಪ್ರತಿಮ ಕ್ರಿಕೆಟಿಗ ಹಾಗೂ ವ್ಯಕ್ತಿತ್ವವನ್ನು ಹೊಂದಿದ್ದರು. ಬಹುತೇಕ ಎಲ್ಲ ಕ್ರಿಕೆಟ್ ಅಭಿಮಾನಿಗಳಿಗೂ ಅವರ ಬಗ್ಗೆ ತಿಳಿದಿತ್ತು' ಎಂದು ಹೇಳಿದರು.

'ನೀವು ಅವರನ್ನು ನಕಲು ಮಾಡಲು ಸಾಧ್ಯವಿಲ್ಲ. ಕ್ರಿಕೆಟ್ ಮೇಲೆ ಅಂತಹ ಪರಿಣಾಮವನ್ನು ಬೀರಿದ್ದರು. ಮೈದಾನದ ಹೊರಗೆ ಅವರ ಜೊತೆಗೆ ಮಾತನಾಡುವ ಅವಕಾಶ ನನಗೂ ದೊರಕಿತ್ತು. ಯಾವಾಗಲೂ ಧನಾತ್ಮಕವಾಗಿ ಇರುತ್ತಿದ್ದರು ಮತ್ತು ಅವರ ಸಂಭಾಷಣೆಗಳು ಯಾದೃಚ್ಛಿಕವಾಗಿರಲಿಲ್ಲ. ಅದು ರಚನಾತ್ಮಕತೆಯೊಂದಿಗೆ ಏನಾದರೂ ಹೊಸತನವನ್ನು ಕಲಿಯಲು ಸಾಧ್ಯವಾಗುತ್ತಿತ್ತು. ವಿಶೇಷವಾಗಿ ಟೆಸ್ಟ್ ಕ್ರಿಕೆಟ್ ಬಗ್ಗೆ ತುಂಬಾ ಉತ್ಸುಕರಾಗಿ ಮಾತನಾಡುತ್ತಿದ್ದರು' ಎಂದು ಹೇಳಿದರು.

ತಾವು ಭೇಟಿ ಮಾಡಿದವರ ಪೈಕಿ ಶೇನ್ ವಾರ್ನ್ ಅತ್ಯಂತ ಆತ್ಮವಿಶ್ವಾಸ ಭರಿತ ವ್ಯಕ್ತಿಗಳಲ್ಲಿ ಓರ್ವರಾಗಿದ್ದಾರೆ ಎಂದು ಕೊಹ್ಲಿ ಕೊಂಡಾಡಿದರು.

'ಅವರಿಗೆ ಕ್ರಿಕೆಟ್ ಮೇಲೆ ಅಪಾರ ಪ್ರೀತಿಯಿತ್ತು. ಅವರ ನಿಧನದ ಸುದ್ದಿ ಎಲ್ಲರಲ್ಲೂ ಆಘಾತವನ್ನುಂಟು ಮಾಡಿದೆ. ಅವರು ಬದಕಲು ಬಯಸಿದ ರೀತಿಯಲ್ಲೇ ಬದುಕಿದ್ದಾರೆ. ಮೈದಾನದ ಹೊರಗೆ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನನಗೆ ಸಾಧ್ಯವಾಗಿದೆ' ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.