ADVERTISEMENT

ಇಂಗ್ಲೆಂಡ್‌ನ ಮಾಜಿ ಬ್ಯಾಟರ್ ಗ್ರಹಾಂ ಥೋರ್ಪ್‌ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ಏಜೆನ್ಸೀಸ್
Published 10 ಮೇ 2022, 13:18 IST
Last Updated 10 ಮೇ 2022, 13:18 IST
ಗ್ರಹಾಂ ಥೋರ್ಪ್‌– ಟ್ವಿಟರ್‌ ಚಿತ್ರ
ಗ್ರಹಾಂ ಥೋರ್ಪ್‌– ಟ್ವಿಟರ್‌ ಚಿತ್ರ   

ಲಂಡನ್‌: ಇಂಗ್ಲೆಂಡ್ ತಂಡದ ಮಾಜಿ ಬ್ಯಾಟರ್ ಮತ್ತು ಕೋಚ್‌ ಗ್ರಹಾಂ ಅವರನ್ನು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂಗ್ಲೆಂಡ್‌ನ ‘ಆಟಗಾರರ ಒಕ್ಕೂಟ’ ಮಂಗಳವಾರ ಈ ವಿಷಯ ತಿಳಿಸಿದೆ.

52 ವರ್ಷದ ಥೋರ್ಪ್‌ ಅವರು ಜನವರಿಯಲ್ಲಿ ನಡೆದ ಆ್ಯಷಸ್ ಸರಣಿಯ ಬಳಿಕ ಇಂಗ್ಲೆಂಡ್ ತಂಡದ ಸಹಾಯಕ ತರಬೇತುದಾರ ಹುದ್ದೆಯಿಂದ ನಿರ್ಗಮಿಸಿದ್ದರು. ಬಳಿಕ ಅಫ್ಘಾನಿಸ್ತಾನದ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

‘ಗ್ರಹಾಂ ಥೋರ್ಪ್‌ ಅವರಿಗೆ ಇತ್ತೀಚೆಗೆ ತೀವ್ರ ಅನಾರೋಗ್ಯ ಬಾಧಿಸಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‘ ಎಂದು ವೃತ್ತಿಪರ ಕ್ರಿಕೆಟಿಗರ ಒಕ್ಕೂಟವು ಅವರ ಕುಟುಂಬದ ವಿನಂತಿಯ ಮೇರೆಗೆ ಹೇಳಿಕೆ ನೀಡಿದೆ.

ADVERTISEMENT

‘ಥೋರ್ಪ್‌ ಅವರಿಗಿರುವ ಕಾಯಿಲೆಯ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ‘ ಎಂದು ಸಂಘದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಂಗ್ಲೆಂಡ್ ಪರ 100 ಟೆಸ್ಟ್‌ಗಳನ್ನು ಆಡಿರುವ ಥೋರ್ಫ್‌ 6,744 ರನ್‌ ಗಳಿಸಿದ್ದಾರೆ. ಅದರಲ್ಲಿ 16 ಶತಕಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.