ಮೊಹಮ್ಮದ್ ನಬಿ ಹಾಗೂ ಅವರ ಮಗ ಹಸನ್ ಇಸಾಖಿಲ್
ಚಿತ್ರ ಕೃಪೆ: @ESPNcricinfo
ಅಫಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿ ಹಾಗೂ ಅವರ ಮಗ ಹಸನ್ ಇಸಾಖಿಲ್ ಟಿ20 ಪಂದ್ಯವೊಂದರಲ್ಲಿ ಜೊತೆಯಾಗಿ ಆಡಿದ ವಿಶ್ವದ ಮೊದಲ ತಂದೆ-ಮಗ ಎಂಬ ದಾಖಲೆ ಬರೆದಿದ್ದಾರೆ.
ಭಾನುವಾರ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನ 22ನೇ ಪಂದ್ಯದಲ್ಲಿ ಢಾಕಾ ಕ್ಯಾಪಿಟಲ್ಸ್ ಮತ್ತು ನೋಖಾಲಿ ಎಕ್ಸ್‌ಪ್ರೆಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನೋಖಾಲಿ ಎಕ್ಸ್‌ಪ್ರೆಸ್ ಪರ ಮೊಹಮ್ಮದ್ ನಬಿ ಹಾಗೂ ಅವರ ಮಗ ಹಸನ್ ಇಸಾಖಿಲ್ ಆಡಿದ್ದಾರೆ.
ಈ ಪಂದ್ಯದಲ್ಲಿ ಹಸನ್ ಇಸಾಖಿಲ್ ಆರಂಭಿಕನಾಗಿ ಕಣಕ್ಕಿಳಿದರು. 5ನೇ ಕ್ರಮಾಂಕದಲ್ಲಿ ಮೊಹಮ್ಮದ್ ನಬಿ ಬ್ಯಾಟ್ ಬೀಸಿದರು. ಇವರಿಬ್ಬರೂ 4ನೇ ವಿಕೆಟ್‌ಗೆ 53 ರನ್‌ಗಳ ಜೊತೆಯಾಟವಾಡಿದರು. ಈ ಮೂಲಕ 53 ರನ್ ಜೊತೆಯಾಟವಾಡಿದ ವಿಶ್ವದ ಮೊದಲ ತಂದೆ ಮಗ ಎಂಬ ದಾಖಲೆಯನ್ನೂ ಬರೆದಿದ್ದಾರೆ.
ಹಸನ್ ಇಸಾಖಿಲ್ ಈ ಪಂದ್ಯದಲ್ಲಿ 60 ಎಸೆತಗಳನ್ನು ಎದುರಿಸಿ 5 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 92 ರನ್ ಬಾರಿಸಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.
ಮೊದಲು ಬ್ಯಾಟ್ ಮಾಡಿದ ನೋಖಾಲಿ ಎಕ್ಸ್‌ಪ್ರೆಸ್ 20 ಓವರ್ಗಳಲ್ಲಿ 184 ರನ್ಗಳನ್ನು ಕಲೆಹಾಕಿತು. ಢಾಕಾ ಕ್ಯಾಪಿಟಲ್ಸ್ 18.2 ಓವರ್ಗಳಲ್ಲಿ 143 ರನ್ಗಳಿಗೆ ಆಲೌಟ್ ಆಯಿತು. ನೋಖಾಲಿ ಎಕ್ಸ್‌ಪ್ರೆಸ್ ತಂಡವು 41 ರನ್ಗಳಿಂದ ಜಯ ಸಾಧಿಸಿತು.