ADVERTISEMENT

IPL 2023: ಹಳೆಯ ಲಯಕ್ಕೆ ಮರಳಿದ ಆರ್‌ಸಿಬಿ; ಟ್ರೋಲ್‌ಗೆ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಏಪ್ರಿಲ್ 2023, 10:53 IST
Last Updated 7 ಏಪ್ರಿಲ್ 2023, 10:53 IST
   

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2023ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ.

ಇದರೊಂದಿಗೆ ವಿಂಟೇಜ್ ಆರ್‌ಸಿಬಿ ತನ್ನ ಹಳೆಯ ಲಯಕ್ಕೆ ಮರಳಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಮುಂಬೈ ವಿರುದ್ಧ 8 ವಿಕೆಟ್ ಅಂತರದ ಗೆಲುವು ದಾಖಲಿಸಿದ್ದ ಆರ್‌ಸಿಬಿ, ಕೆಕೆಆರ್ ವಿರುದ್ಧ 81 ರನ್ ಅಂತರದ ಸೋಲು ಅನುಭವಿಸಿತ್ತು.

ADVERTISEMENT

ಈ ಹಿಂದೆಯೂ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಲು ವಿಫಲರಾಗಿರುವುದು ಆರ್‌ಸಿಬಿ ಹಿನ್ನಡೆಗೆ ಕಾರಣವಾಗಿತ್ತು.

ಚೊಚ್ಚಲ ಟ್ರೋಫಿ ನಿರೀಕ್ಷೆಯಲ್ಲಿರುವ ಆರ್‌ಸಿಬಿ, ಈ ಆವೃತ್ತಿಯಲ್ಲೂ ಹಳೆಯ ಚಾಳಿ ಮುಂದುವರಿಸಿದೆ ಎಂದು ಟೀಕೆ ಮಾಡಲಾಗಿದೆ.

ಕೆಕೆಆರ್‌ಗೆ 204 ರನ್ ಬಿಟ್ಟುಕೊಟ್ಟಿದ್ದ ಆರ್‌ಸಿಬಿ ಬಳಿಕ 123 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಪಂದ್ಯದ ಬಳಿಕ ಕಳಪೆ ಬ್ಯಾಟಿಂಗ್ ಕುರಿತು ಮಾತನಾಡಿದ ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ, ತಂಡದ ಬ್ಯಾಟಿಂಗ್ ತೀರಾ ಸಾಧಾರಣ ಮಟ್ಟದಲ್ಲಿತ್ತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.