ADVERTISEMENT

ಬಾಂಗ್ಲಾ ಕ್ರಿಕೆಟಿಗ ಮೊಷರಫ್ ಹೊಸೇನ್‌ಗೆ ಕೋವಿಡ್

ಪಿಟಿಐ
Published 10 ಆಗಸ್ಟ್ 2020, 13:01 IST
Last Updated 10 ಆಗಸ್ಟ್ 2020, 13:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ಆಟಗಾರ, ಎಡಗೈ ಸ್ಪಿನ್ನರ್ ಮೊಷರಫ್ ಹೊಸೇನ್ ಅವರಿಗೆ ಕೋವಿಡ್ –19 ಸೋಂಕು ಇರುವುದು ದೃಢಪಟ್ಟಿದೆ. 38 ವರ್ಷದ ಹೊಸೇನ್ ಅವರು ಬಾಂಗ್ಲಾದೇಶ ಪರ ಐದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.

ಮೆದುಳಿನಲ್ಲಿ ಗಡ್ಡೆ ಇದ್ದ ಕಾರಣ ಶಸ್ತ್ರಕ್ರಿಯೆಗೆ ಒಳಗಾಗಿದ್ದ ಹೊಸೇನ್ ನಾಲ್ಕು ತಿಂಗಳು ಕಠಿಣ ಚಿಕಿತ್ಸೆಗೆ ಒಳಗಾಗಿದ್ದರು. ಅವರ ತಂದೆ ಇತ್ತೀಚೆಗೆ ಕೋವಿಡ್–19 ಸೋಂಕಿಗೆ ಒಳಗಾಗಿದ್ದರು.ಹೊಸೇನ್ ಅವರಿಗೆ ಕೋವಿಡ್ ಇರುವುದು ಭಾನುವಾರ ದೃಢಪಟ್ಟಿದ್ದು ಮನೆಯಲ್ಲೇ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

‘ನನ್ನ ತಂದೆ ಸೋಂಕಿಗೆ ಒಳಗಾಗಿದ್ದು ಅವರನ್ನು ಸಿಎಂಎಚ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದೆ ನನ್ನಲ್ಲೂ ಲಕ್ಷಣಗಳು ಕಾಣಿಸಿಕೊಂಡವು. ಆದ್ದರಿಂದ ಪರೀಕ್ಷೆಗೆ ಒಳಗಾಗಿದ್ದೆ. ಈಗ ಆರೋಗ್ಯವಾಗಿದ್ದೇನೆ. ಪತ್ನಿ ಮತ್ತು ಮಗುವನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ವರದಿ ನೆಗೆಟಿವ್ ಆಗಿದೆ’ ಎಂದು ಹೊಸೇನ್ ಹೇಳಿರುವುದಾಗಿ ಸ್ಥಳೀಯ ದೈನಿಕ ‘ದಿ ಡೈಲಿ ಸ್ಟಾರ್’ ವರದಿ ಮಾಡಿದೆ.

ADVERTISEMENT

ಕಳೆದ ವರ್ಷ ಬ್ರೈನ್ ಟ್ಯೂಮರ್‌ಗೆ ಒಳಗಾಗಿದ್ದ ಅವರು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಈ ವರ್ಷ ದೇಶಿ ಕ್ರಿಕೆಟ್‌ಗೆ ಮರಳುವ ಹುಮ್ಮಸ್ಸಿನಲ್ಲಿದ್ದರು. ಮಾಜಿ ನಾಯಕ ಮಷ್ರಫೆ ಮೊರ್ತಜಾ, ನಮ್ಜುಲ್ ಇಸ್ಲಾಮ್ ಮತ್ತು ನಫೀಜ್ ಇಕ್ಬಾಲ್ ಅವರಲ್ಲಿ ಜೂನ್ ತಿಂಗಳಲ್ಲಿ ಸೋಂಕು ದೃಢವಾಗಿತ್ತು. ಕಳೆದ ವಾರ 18 ಫುಟ್‌ಬಾಲ್ ಆಟಗಾರರಿಗೆ ಕೋವಿಡ್–19 ಇರುವುದನ್ನು ಅಲ್ಲಿನ ಫುಟ್‌ಬಾಲ್ ಫೆಡರೇಷನ್ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.