ADVERTISEMENT

ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ವಿರುದ್ಧ ಪತ್ನಿಯಿಂದ ದೂರು: ಎಫ್‌ಐಆರ್‌ ದಾಖಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2023, 4:37 IST
Last Updated 5 ಫೆಬ್ರುವರಿ 2023, 4:37 IST
ವಿನೋದ್‌ ಕಾಂಬ್ಳಿ
ವಿನೋದ್‌ ಕಾಂಬ್ಳಿ    

ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ ಅವರ ಪತ್ನಿ ಆ್ಯಂಡ್ರಿಯಾ ಹೆವಿಟ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ಶುಕ್ರವಾರ ಬಾಂದ್ರಾ (ಪಶ್ಚಿಮ) ಫ್ಲಾಟ್‌ನಲ್ಲಿ ವಿನೋದ್ ಕಾಂಬ್ಳಿ ಅವರು ಕುಡಿತದ ಅಮಲಿನಲ್ಲಿ ತಲೆಗೆ ಹೊಡೆದು ನಿಂದಿಸಿದ್ದಾರೆ ಎಂದು ಆರೋಪಿಸಿ ಆ್ಯಂಡ್ರಿಯಾ ಹೆವಿಟ್‌ ಅವರು ಎಫ್‌ಐಆರ್ ದಾಖಲಿಸಿದ್ದಾರೆ.

ವಿನೋದ್ ಕಾಂಬ್ಳಿ ವಿರುದ್ಧ ಐಪಿಸಿ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಗಾಯಗೊಳಿಸುವುದು) ಮತ್ತು 504 (ಅಪಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಾಂದ್ರಾ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಕರಣದಲ್ಲಿ ವಿನೋದ್‌ ಕಾಂಬ್ಳಿಯವರನ್ನು ಇನ್ನೂ ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ವಿವಾದಗಳ ಸರಣಿ

ಈ ಹಿಂದೆ, ಮನೆಕೆಲಸದಾಕೆ ನೀಡಿದ ದೂರಿನಂತೆ ವಿನೋದ್‌ ಕಾಂಬ್ಳಿ ಹಾಗೂ ಪತ್ನಿಯ ಮೇಲೆ ಎಫ್‌ಐಆರ್‌ ದಾಖಲಿಸಲಾಗಿತ್ತು. ವೇತನ ಕೇಳಿದ್ದಕ್ಕೆ ಅನುಚಿತವಾಗಿ ವರ್ತಿಸಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ ಎಂದು ಕೆಲಸದಾಕೆ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಕಾಂಬ್ಳಿ ದಂಪತಿ ವಿರುದ್ಧ ದೂರು ನೀಡಿದ್ದಳು.

ಇನ್ನೊಂದೆಡೆ, 2022ರ ಫೆಬ್ರುವರಿಯಲ್ಲಿ ನಿರ್ಲಕ್ಷ್ಯತನದಿಂದ ಕಾರು ಚಾಲನೆ ಮಾಡಿ ಖಾಸಗಿ ಆಸ್ತಿಗೆ ದಕ್ಕೆ ಮಾಡಿದ್ದರ ಆರೋಪದ ಮೇಲೆ ವಿನೋದ್ ಕಾಂಬ್ಳಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.