ADVERTISEMENT

ಕ್ರಿಕೆಟ್‌ ಆಯ್ಕೆ ಸಮಿತಿ ಮಾಜಿ ಸದಸ್ಯ ಕಿಶನ್ ರುಂಗ್ಟಾ ಕೋವಿಡ್‌ನಿಂದ ಸಾವು

ಪಿಟಿಐ
Published 2 ಮೇ 2021, 10:06 IST
Last Updated 2 ಮೇ 2021, 10:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕ್ರಿಕೆಟ್‌ ಆಡಳಿತಗಾರ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಆಯ್ಕೆ ಸಮಿತಿ ಸದಸ್ಯ ಕಿಶನ್ರುಂಗ್ಟಾ (88) ಅವರು ಕೋವಿಡ್‌ನಿಂದಾಗಿ ಜೈಪುರದ ಆಸ್ಪತ್ರೆಯೊಂದರಲ್ಲಿ ಶನಿವಾರ ರಾತ್ರಿ ನಿಧನರಾದರು.

ರಾಜಸ್ಥಾನ ಕ್ರಿಕೆಟ್‌ ತಂಡದ ನಾಯಕರೂ ಆಗಿದ್ದ ರುಂಗ್ಟಾ ಅವರಿಗೆ ಕಳೆದ ವಾರ ಸೋಂಕು ದೃಢಪಟ್ಟಿತ್ತು ಎಂದು ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆಗೆ ಖಚಿತಪಡಿಸಿವೆ.

1998ರಲ್ಲಿ ಅವರು ಕೇಂದ್ರ ವಲಯವನ್ನು ಪ್ರತಿನಿಧಿಸಿ ಆಯ್ಕೆಗಾರರ ಸಮಿತಿಗೆ ಸೇರ್ಪಡೆಗೊಂಡಿದ್ದರು. ಅವರು 59 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 2717 ರನ್‌ ಗಳಿಸಿದ್ದಾರೆ.

ADVERTISEMENT

ಅವರ ಹಿರಿಯ ಸೋದರ ಪುರುಷೋತ್ತಮ ರುಂಗ್ಟಾ ಅವರು 1970ರ ದಶಕದಲ್ಲಿ ಬಿಸಿಸಿಐ ಖಜಾಂಚಿಯಾಗಿದ್ದರು.

2005ರ ಸುಮಾರಿಗೆ ಲಲಿತ್ ಮೋದಿ ತಂಡ ಕ್ರಿಕೆಟ್‌ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಮೇಲೆ ರಾಜಸ್ಥಾನದಲ್ಲಿ ರುಂಗ್ಟಾ ಅವರ ಕುಟುಂಬದ ಆಧಿಪತ್ಯ ಕೊನೆಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.