ADVERTISEMENT

ಭಾರತದ ವಿರುದ್ಧ ಆಡುವಾಗ ಪಾಕಿಸ್ತಾನ ತಂಡವು ಹೆಚ್ಚಿನ ಒತ್ತಡ ಎದುರಿಸಲಿದೆ: ಗಂಭೀರ್

ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಆಗಸ್ಟ್ 2021, 5:42 IST
Last Updated 19 ಆಗಸ್ಟ್ 2021, 5:42 IST
ಗೌತಮ್‌ ಗಂಭೀರ್‌
ಗೌತಮ್‌ ಗಂಭೀರ್‌   

ಮುಂಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನದ ಎದುರಿನ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ.

ಎರಡು ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಮುಖಿಯಾಗಲಿರುವುದು ಕ್ರಿಕೆಟ್‌ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಈ ವಿಚಾರದ ಕುರಿತು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌, 'ಭಾರತದ ವಿರುದ್ಧ ಆಡುವ ಸಂದರ್ಭದಲ್ಲಿ ಬಾಬರ್‌ ಆಜಂ ನೇತೃತ್ವದ ಪಾಕ್‌ ತಂಡವು ಹೆಚ್ಚು ಒತ್ತಡಕ್ಕೆ ಒಳಗಾಗಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ವಿಶ್ವಕಪ್‌ನಂತಹ ಕ್ರಿಕೆಟ್‌ ಟೂರ್ನಿಗಳಲ್ಲಿ ಪಾಕ್‌ ವಿರುದ್ಧ ಭಾರತ ತಂಡದ ಸಾಧನೆ ಅತ್ಯುತ್ತಮವಾಗಿದೆ. ಭಾರತವು ಪಾಕ್‌ಗಿಂತ ಶ್ರೇಷ್ಠ ತಂಡವನ್ನು ಹೊಂದಿದೆ ಎಂದು ಗಂಭೀರ್‌ ಹೇಳಿದ್ದಾರೆ,

'ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಿರುವ ಐದು ಪಂದ್ಯಗಳಲ್ಲಿ ಭಾರತ ಜಯಸಾಧಿಸಿದೆ. ಈ ದಾಖಲೆಗಳು ಸಹಜವಾಗಿ ಪಾಕಿಸ್ತಾನದ ಮೇಲೆ ಹೆಚ್ಚಿನ ಒತ್ತಡವನ್ನು ಹೇರಲಿವೆ' ಎಂದು ಗಂಭೀರ್‌ ತಿಳಿಸಿದ್ದಾರೆ.

'ಪ್ರಸ್ತುತ ಸಂದರ್ಭದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಉತ್ತಮ ತಂಡವನ್ನು ಹೊಂದಿದೆ. ಆದರೆ, ಟಿ20 ಪಂದ್ಯಗಳಲ್ಲಿ ಯಾರು ಯಾರನ್ನು ಬೇಕಾದರೂ ಸೋಲಿಸಬಹುದು. ನಾವು ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸಬಾರದು' ಎಂದೂ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.