ADVERTISEMENT

ODI ವಿಶ್ವಕಪ್‌ಗೆ ಎರಡೂವರೆ ವರ್ಷ ಬಾಕಿ ಇದೆ: ರೋ–ಕೋ ಭವಿಷ್ಯದ ಕುರಿತು ಗೌತಿ ಮಾತು

ಪಿಟಿಐ
Published 14 ಅಕ್ಟೋಬರ್ 2025, 9:57 IST
Last Updated 14 ಅಕ್ಟೋಬರ್ 2025, 9:57 IST
<div class="paragraphs"><p>ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ</p></div>

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ

   

–ಪಿಟಿಐ ಚಿತ್ರ

ನವದೆಹಲಿ: ಭಾರತ ತಂಡದ ಪ್ರಮುಖ ಆಟಗಾರರಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027 ರ ಏಕದಿನ ವಿಶ್ವಕಪ್ ಆಡಲು ಉತ್ಸುಕರಾಗಿದ್ದಾರೆ. ಆದರೆ ಭಾರತ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಈ ತಾರಾ ಆಟಗಾರರ ಭವಿಷ್ಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ, ಏಕದಿನ ವಿಶ್ವಕಪ್‌ಗೆ ಇನ್ನೂ ಎರಡೂವರೆ ವರ್ಷ ಬಾಕಿ ಉಳಿದಿದೆ. ನಾವು ಪ್ರಸ್ತುತ ಏನು ಮಾಡಬೇಂದು ಯೋಜನೆ ರೂಪಿಸಬೇಕು ಎಂದು ಹೇಳಿದರು.

ADVERTISEMENT

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡಿರುವ ಏಕದಿನ ತಂಡಕ್ಕೆ ಶುಭಮನ್ ಗಿಲ್ ಅವರನ್ನು ನಾಯಕರನ್ನಾಗಿ ಮಾಡುವ ಮೂಲಕ ತಂಡದಲ್ಲಿ ಪರಿವರ್ತನೆ ಆರಂಭಿಸಲಾಗಿದೆ. 2027ರ ವಿಶ್ವಕಪ್ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ 39 ಹಾಗೂ ರೋಹಿತ್ ಶರ್ಮಾಗೆ 40 ವರ್ಷ ವಯಸ್ಸಾಗಿರುತ್ತದೆ. ಹಾಗಾಗಿ ಗಂಭೀರ್ ಈ ಇಬ್ಬರು ಆಟಗಾರರ ಭವಿಷ್ಯದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಂಡೀಸ್ ಸರಣಿ ಗೆದ್ದ ಬಳಿಕ ಮಾತನಾಡಿದ ಗಂಭೀರ್, ಏಕದಿನ ವಿಶ್ವಕಪ್‌ಗೆ ಇನ್ನೂ ಎರಡೂವರೆ ವರ್ಷಗಳ ಕಾಲಾವಕಾಶವಿದೆ. ಪ್ರಸ್ತುತ ನಾವು ತಂಡವಾಗಿ ಉಳಿಯುವುದು ಬಹಳ ಮುಖ್ಯ. ನಿಸ್ಸಂಶಯವಾಗಿ ಕೊಹ್ಲಿ ಮತ್ತು ರೋಹಿತ್ ಗುಣಮಟ್ಟದ ಆಟಗಾರರು. ಅವರು ಆಸ್ಟ್ರೇಲಿಯಾ ಸರಣಿಯಲ್ಲಿ ಭಾಗವಾಗಿರುವುದು ತಂಡಕ್ಕೆ ನೆರವಾಗಲಿದೆ ಎಂದರು.

ಮುಂದುವರೆದು ಮಾತನಾಡಿದ ಅವರು, ಆ ಇಬ್ಬರು ಆಟಗಾರರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಯಶಸ್ಸು ಗಳಿಸಬಹುದು. ಮಾತ್ರವಲ್ಲ, ಒಂದು ತಂಡವಾಗಿ ನಾವು ಯಶಸ್ವಿಯಾಗಿ ಸರಣಿಯನ್ನು ಮುಗಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಗಂಭೀರ್ ಹೇಳಿದರು. ಮುಂದಿನ ಎರಡು ತಿಂಗಳ ಅಂತರದ‌ಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 3, ದಕ್ಷಿಣ ಆಫ್ರಿಕಾ ವಿರುದ್ಧ 3 ಮತ್ತು ನ್ಯೂಜಿಲೆಂಡ್ ವಿರುದ್ಧ 3 ಒಟ್ಟು 9 ಏಕದಿನ ಪಂದ್ಯಗಳನ್ನು ಆಡಲಿದೆ. ಇಲ್ಲಿಯ ಪ್ರದರ್ಶನದ ಮೇಲೆ ಇವರ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.