ಕೇನ್ಸ್, ಆಸ್ಟ್ರೇಲಿಯಾ: ಕೆಮರಾನ್ ಗ್ರೀನ್ ಮತ್ತು ಅಲೆಕ್ಸ್ ಕೇರಿ ಅವರ ಉತ್ತಮ ಜತೆಯಾಟದ ನೆರವಿನಿಂದ ಆಸ್ಟ್ರೇಲಿಯಾ ತಂಡ, ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎರಡು ವಿಕೆಟ್‌ಗಳಿಂದ ಮಣಿಸಿತು.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 232 ರನ್ ಗಳಿಸಿತು. ಆ್ಯರನ್ ಫಿಂಚ್ ಬಳಗ 45 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಸಾಧಾರಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 44 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಆದರೆ ಯುವ ಆಟಗಾರ ಗ್ರೀನ್ (ಔಟಾಗದೆ 89, 92 ಎ.) ಮತ್ತು ಕೇರಿ (85 ರನ್, 99 ಎ.) ಅವರು ಆರನೇ ವಿಕೆಟ್‌ಗೆ 158 ರನ್ ಸೇರಿಸಿ ಆತಿಥೇಯ ತಂಡಕ್ಕೆ ರೋಚಕ ಜಯ ತಂದಿತ್ತರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 9ಕ್ಕೆ 232 (ಡೆವೊನ್ ಕಾನ್ವೆ 46, ಕೇನ್ ವಿಲಿಯಮ್ಸನ್ 45, ಟಾಮ್ ಲಥಾಮ್ 43, ಜೋಶ್ ಹ್ಯಾಜೆಲ್‌ವುಡ್ 31ಕ್ಕೆ 3, ಗ್ಲೆನ್ ಮ್ಯಾಕ್ಸ್‌ವೆಲ್ 52ಕ್ಕೆ 4) ಆಸ್ಟ್ರೇಲಿಯಾ 45 ಓವರ್‌ಗಳಲ್ಲಿ 8ಕ್ಕೆ 233 (ಡೇವಿಡ್ ವಾರ್ನರ್ 20, ಅಲೆಕ್ಸ್ ಕೇರಿ 85, ಕೆಮರಾನ್ ಗ್ರೀನ್ ಔಟಾಗದೆ 89, ಟ್ರೆಂಟ್ ಬೌಲ್ಟ್ 40ಕ್ಕೆ 4) ಫಲಿತಾಂಶ: ಆಸ್ಟ್ರೇಲಿಯಾಕ್ಕೆ 2 ವಿಕೆಟ್ ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.