ನವದೆಹಲಿ: ಇಂಗ್ಲೆಂಡ್ ಟಿ20 ತಂಡದ ದಿಗ್ಗಜ ಜೋಸ್ ಬಟ್ಲರ್, ಐಪಿಎಲ್‌ನ ಗುಜರಾತ್ ಟೈಟನ್ಸ್‌ನ ಕೊನೆಯ ಮೂರು ಲೀಗ್ ಪಂದ್ಯಗಳಲ್ಲಿ ಆಡಿದ ನಂತರ ತವರಿಗೆ ತೆರಳಲಿದ್ದಾರೆ. ಅವರು ಪ್ಲೇ ಆಫ್ ಆಡುವುದಿಲ್ಲ.
ಏಕೆಂದರೆ. ಐಪಿಎಲ್ ಪ್ಲೇ ಆಫ್ ಪಂದ್ಯಗಳು ಮೇ 29ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಆರಂಭವಾಗಲಿರುವ ಇಂಗ್ಲೆಂಡ್‌ನ ವೈಟ್ ಬಾಲ್ ಸರಣಿ ಸಮಯದಲ್ಲೇ ನಡೆಯುವುದರಿಂದ ಬಟ್ಲರ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ಟೈಟನ್ಸ್ ತಂಡವು ಈಗ 11 ಪಂದ್ಯಗಳಿಂದ 16 ಅಂಕಗಳನ್ನು ಗಳಿಸಿದ್ದು, ಲೀಗ್ ಬಳಿಕ ಅಗ್ರ ಎರಡು ತಂಡಗಳಲ್ಲಿ ಒಂದಾಗುವ ಸಾಧ್ಯತೆ ಇದೆ. ಉಳಿದಿರುವ ಮೂರು ಪಂದ್ಯಗಳು ಡೆಲ್ಲಿ ಕ್ಯಾಪಿಟಲ್ಸ್ (ಮೇ 18), ಲಖನೌ ಸೂಪರ್ ಜೈಂಟ್ಸ್ (ಮೇ 22) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಮೇ 25) ವಿರುದ್ಧ ನಡೆಯಲಿವೆ.
ಇಎಸ್‌ಪಿಎನ್ ಕ್ರಿಕ್‌ಇನ್ಫೊ ವರದಿಯ ಪ್ರಕಾರ, ಶ್ರೀಲಂಕಾದ ಎಡಗೈ ಬೌಲರ್ ಕುಸಲ್ ಮೆಂಡಿಸ್ ಪ್ಲೇ ಆಫ್ ಹಂತಗಳಲ್ಲಿ ಬಟ್ಲರ್ ಬದಲಿಗೆ ಆಡಲಿದ್ದಾರೆ. ಇತರ ಗಮನಾರ್ಹ ಇಂಗ್ಲೆಂಡ್ ಆಟಗಾರರ ಪೈಕಿ ಕೋಲ್ಕತ್ತ ನೈಟ್ ರೈಡರ್ಸ್‌ನ ಮೊಯಿನ್ ಅಲಿ, ಜೋಫ್ರಾ ಆರ್ಚರ್ (ರಾಜಸ್ಥಾನ್ ರಾಯಲ್ಸ್), ಸ್ಯಾಮ್ ಕರನ್ ಮತ್ತು ಜೇಮಿ ಓವರ್ಟನ್ (ಇಬ್ಬರೂ ಸಿಎಸ್‌ಕೆ) ತಂಡಗಳಿಗೆ ಮರಳುತ್ತಿಲ್ಲ.
ಆದರೆ, ಲಿಯಾಮ್ ಲಿವಿಂಗ್‌ಸ್ಟೋನ್ ಆಸ್ಟ್ರೇಲಿಯಾದ ಟಿಮ್ ಡೇವಿಡ್ ಜೊತೆಗೆ ಪಂದ್ಯಾವಳಿಯ ಉಳಿದ ಪಂದ್ಯಗಳಲ್ಲಿ ಆಡಲು ಆರ್‌ಸಿಬಿಗೆ ವಾಪಸ್ ಆಗುತ್ತಿದ್ದಾರೆ. ಮೊಯಿನ್ ಅಲಿ ಗಾಯದಿಂದ ಬಳಲುತ್ತಿದ್ದಾರೆ.
ಎನ್‌ಒಸಿ ಸಮಸ್ಯೆಯಿಂದಾಗಿ ಮುಸ್ತಾಫಿಜುರ್ ಅವರ ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿನ ಒಪ್ಪಂದ ಸ್ಥಗಿತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.